ದಾವಣಗೆರೆ : ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಹಲ್ಗಾವ್ನಲ್ಲಿ ನಡೆದಿರುವ ಉಗ್ರ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು. ದಾಳಿಯ ಬಗ್ಗೆ ಷಂಡ ಜಾತ್ಯಾತೀತರು ಖಂಡನೆ ಮಾಡುವ ಬದಲು ಭದ್ರತಾ ವೈಫಲ್ಯ ಎಂದು ಹೇಳುತ್ತಿದ್ದಾರೆ ಎಂದು ಅಸಂವಿಧಾನಿಕ ಪದಗಳಿಂದ ಪ್ರತಿಕ್ರಿಯೆ ನೀಡಿದ್ದಾರೆ.
ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಹೇಳಿಕೆ ನೀಡಿದ ಶಾಸಕ ಯತ್ನಾಳ್ ‘ ಕಳೆದ ಹತ್ತು ವರ್ಷದಿಂದ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಇತ್ತು. ಆದರೆ ಭಯೋತ್ಪಾದಕರು ಕಾಶ್ಮೀರವನ್ನ ವಿಮೋಚನೆ ಮಾಡುವ ಹುಚ್ಚು ಸಾಹಸ ಮಾಡಿದ್ದರು. ಮನಮೋಹನ್ ಸಿಂಗ್ ಹಾಗೂ ಹಿಂದಿನವರ ಕೈಲಿ ನಿಯಂತ್ರಣ ಇರಲಿಲ್ಲ. ಆರ್ಟಿಕಲ್ 370ರ ಬಳಿಕ ಈಗ ಶಾಂತಿ ಇತ್ತು, ಪ್ರವಾಸೋದ್ಯಮ ನಡೀತಾ ಇತ್ತು ಆದರೆ ಈಗ ಈ ಘಟನೆ ನಡೆದಿದೆ. ಇದನ್ನೂ ಓದಿ :ಭಾರತಾಂಬೆಯ ಕಳಶದಂತಿರುವ ಕಾಶ್ಮೀರ ಎಂದಿಗೂ ನಮ್ಮದೆ: ಧ್ರುವ ಸರ್ಜಾ
ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯಲ್ಲಿ 28 ಜನರ ಮೇಲೆ ಗುಂಡು ಹಾರಿಸಿದ್ದಾರೆ. ಇಸ್ಲಾಂ ಮುಲ್ಲಾಗಳು, ಛೇಲಾಗಳು ಇದನ್ನೂ ಭದ್ರತಾ ವೈಫಲ್ಯ ಅಂತಿದಾರೆ. ಷಂಡ ಜಾತ್ಯಾತೀತರು ಖಂಡನೆ ಮಾಡುವ ಬದಲು, ಭದ್ರತಾ ವೈಫಲ್ಯ ಅಂತಿದಾರೆ. ಉಗ್ರವಾದಿಗಳನ್ನ ಅಲ್ಲಲ್ಲೇ ಗುಂಡಿಕ್ಕಿ ಕೊಲ್ಲಬೇಕು. ಅರೆಸ್ಟ್ ಮಾಡಿ ಬಿರಿಯಾನಿ ಕೊಡಿಸೋದು ಬೇಡ. ಅವರನ್ನು ನೇರವಾಗಿ ಎನ್ಕೌಂಟರ್ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ :Pahalgam Attack: ಕಲ್ಮಾ ಹೇಳಿ ಜೀವ ಉಳಿಸಿಕೊಂಡ ಅಸ್ಸಾಂ ವಿಶ್ವವಿದ್ಯಾಲಯದ ಪ್ರೊಫೆಸರ್
ಮುಂದುವರಿದು ಮಾತನಾಡಿದ ಯತ್ನಾಳ್ ‘ಕೆಲ ಸ್ವಾಮೀಜಿಗಳು ಇಸ್ಲಾಂ ಮತ್ತು ಲಿಂಗಾಯತರ ನಡುವೆ ಸಾಮ್ಯತೆ ಇದೆ ಎಂದು ಹೇಳುತ್ತಾರೆ, ಆ ನಾಲಾಯಕ್ ಸ್ವಾಮೀಜಿಗಳು ಈಗ ಮಾತನಾಡಲು. ಈ ಸ್ವಾಮೀಜಿಗಳು ಕಾವಿ ತೊಡುವ ಬದಲು ಹಸಿರು ಬಟ್ಟೆ ಹಾಕಿಕೊಳ್ಳಲಿ. ಕಾಶ್ಮೀರದಲ್ಲಿ ಚಡ್ಡಿ ಬಿಚ್ಚಿಸಿ, ಆಧಾರ್ ಕಾರ್ಡ್ ನೋಡಿ ಶೂಟ್ ಮಾಡಿದ್ದಾರೆ. ಇದನ್ನ ಯಾವೊಬ್ಬ ಮುಸ್ಲಿಂಮನು ಖಂಡಿಸುವುದಿಲ್ಲ ಎಂದು ಹೇಳಿದರು.