Tuesday, April 22, 2025

‘ನಾನ್​ ಮಾಡಿದ್ದು ತಪ್ಪು, ಸಾಧ್ಯವಾದರೆ ನನ್ನನ್ನು ಕ್ಷಮಿಸಿ’: ತಂದೆ ಬಳಿ ಕ್ಷಮೆಯಾಚಿಸಿದ ಪೃಥ್ವಿ ಭಟ್​

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸೀಸನ್​ 15ರ ಸ್ಪರ್ಧಿ ಪೃಥ್ವಿ ಭಟ್​ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದು. ‘ನನ್ನ ಮದುವೆಗೂ ನರಹರಿ ದೀಕ್ಷಿತ್​ ಅವರಿಗೂ ಯಾವುದೇ ಸಂಬಂಧವಿಲ್ಲ. ನಾನು ಮಾಡಿರುವುದು ತಪ್ಪು, ಸಾಧ್ಯವಾದರೆ ನನ್ನನ್ನು ಕ್ಷಮಿಸಿ ಎಂದು ತಮ್ಮ ತಂದೆಯ ಬಳಿ ಕ್ಷಮೆ ಕೋರಿದ್ದಾರೆ.

ಸರಿಗಪಮ ಖ್ಯಾತಿಯ ಪೃಥ್ವಿ ಭಟ್​ ಪೋಷಕರ ವಿರೋಧದ ನಡುವೆ ಅಭಿಷೇಕ್​ ಎಂಬಾತನನ್ನು ಮದುವೆಯಾಗಿದ್ದು. ಮಗಳನ್ನು ವಶೀಕರಣ ಮಾಡಿ ಕರೆದೊಯ್ದಿದ್ದಾರೆ ಎಂದು ಪೃಥ್ವಿ ಅವರ ತಂದೆ ಆರೋಪಿಸಿದ್ದರು. ಸರಿಗಮಪ ಕಾರ್ಯಕ್ರಮದ ಜ್ಯೂರಿಯಾಗಿದ್ದ ನರಹರಿ ದೀಕ್ಷಿತ್​ ಎಂಬುವವರು ಮಗಳನ್ನು ಬೇರೆಯವರ ಜೊತೆ ವಿವಾಹ ಮಾಡಿದ್ದಾರೆ ಎಂದು ಹೇಳಿದ್ದರು. ಇದರ ಕುರಿತು ಪೃಥ್ವಿ ಭಟ್​ ಆಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು. ತಮ್ಮ ತಂದೆಯ ಬಳಿ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ :ಸರಿಗಮಪ ಖ್ಯಾತಿಯ ಪೃಥ್ವಿ ಭಟ್​ ವಿವಾಹ: ವಶೀಕರಣ ಮಾಡಿದ್ದಾರೆ ಎಂದು ಆರೋಪಿಸಿದ ತಂದೆ

ಪೃಥ್ವಿಭಟ್​ ಆಡಿಯೋದಲ್ಲಿ ಏನಿದೆ..!

ಆಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಪೃಥ್ವಿ ಭಟ್​ ‘ಎರಡು ದಿನದಿಂದ ಹವ್ಯಕ್​ ಗ್ರೂಪ್​ ಸೇರಿದಂತೆ ಕೆಲ ಗ್ರೂಪ್​ಗಳಲ್ಲಿ ನರಹರಿ ದೀಕ್ಷಿತ್​ರ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದೆ. ನನ್ನ ಮದುವೆ ವಿಷಯದಲ್ಲಿ ನರಹರಿ ದೀಕ್ಷಿತ್​ ಅವರ ತಪ್ಪಿಲ್ಲ ಎಂದಿದ್ದಾರೆ.

ಮಗಳನ್ನು ವಶೀಕರಣ ಮಾಡಿ ಕರೆದೊಯ್ದಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಪೃಥ್ವಿ ಭಟ್​ ‘ನರಹರಿ ದೀಕ್ಷಿತ್​ ಅವರು ಮಾರ್ಚ್​ 7ರಂದು ಮನೆಗೆ ಬಂದು ನನ್ನ ಮತ್ತು ಅಭಿಷೇಕ್​ನ ಮದುವೆ ಕುರಿತು ತಂದೆಯ ಜೊತೆ ಮಾತನಾಡಿದ್ದರು. ಆದರೆ ಅಂದು ನಾನು ತಂದೆಯ ಮೇಲಿನ ಹೆದರಿಕೆಯಿಂದ ಮದುವೆಯಾಗಲ್ಲ ಎಂದು ಹೇಳಿದ್ದೆ. ಆದರೆ ಅಂದು ಕೂಡ ನನ್ನ ಮನಸ್ಸಲ್ಲಿ ಅಭಿಷೇಕ್​ ಇದ್ದ. ಆದರೆ ಇತ್ತೀಚೆಗೆ ತಂದೆ ಬಹಳ ರಿಸ್ಟ್ರಿಕ್ಷನ್​ ಹಾಕುತ್ತಿದ್ದರು.  ಯಾವುದೇ ಶೋಗಳಿಗೆ ಹೋಗೊದಕ್ಕೆ ಬಿಡುತ್ತಿಲ್ಲ. ಮ್ಯೂಸಿಕ್​ ಬಿಡಬೇಕೂ ಎಂದು ಒತ್ತಾಯ ಮಾಡುತ್ತಿದ್ದರು, ಇದು ನನಗೆ ಭಯ ಉಂಟು ಮಾಡಿದೆ ಎಂದು ಪೃಥ್ವಿ ಭಟ್​ ಹೇಳಿದ್ದಾರೆ.

ಇದನ್ನೂ ಓದಿ :ಮಲೈ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ಜಿಲ್ಲಾಡಳಿತದಿಂದ ಭರದ ಸಿದ್ದತೆ

ಮದುವೆ ವಿಷಯದಲ್ಲಿ ನರಹರಿ ದೀಕ್ಷಿತ್​ ಅವರ ತಪ್ಪಿಲ್ಲ ಎಂದು ಹೇಳಿರುವ ಪೃಥ್ವಿ ಭಟ್​ ‘ನಮ್ಮ ಮದುವೆಗೂ ದೀಕ್ಷಿತ್​ ಸರ್​ಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಮದುವೆಗೂ ಬರುತ್ತಿರಲಿಲ್ಲ. ಆದರೆ ನಾನು ತುಂಬಾ ಒತ್ತಾಯ ಮಾಡಿದ್ದಕ್ಕೆ ಬಂದು ಆರ್ಶೀವಾದ ಮಾಡಿದರು. ಅದನ್ನ ಬಿಟ್ಟರೆ ನಮ್ಮ ಮದುವೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಅವರ ವಿರುದ್ದ ನೀವು ದ್ವೇಷ ಮಾಡಬೇಡಿ ಎಂದು ಪೃಥ್ವಿ ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ಗಾಯಕಿ ಪೃಥ್ವಿ ಭಟ್​ ತಮ್ಮ ತಂದೆಯ ಬಳಿ ಕ್ಷಮೆ ಕೇಳಿದ್ದು. ‘ ನಾನು ಮಾಡಿದ್ದು ತಪ್ಪು. ಆದರೆ ಮದುವೆಯಾದ ದಿನವೇ ನಾನು ನಿಮಗೆ ಮೆಸೆಜ್​ ಮಾಡಿದ್ದೆ. ನಾನೂ ಈಗಲೂ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಸಾಧ್ಯವಾದರೆ ನನ್ನನ್ನು ಕ್ಷಮಿಸಿ ಎಂದು ತಮ್ಮ ತಂದೆಯ ಬಳಿ ಕ್ಷಮೆಯಾಚಿಸಿದ್ದಾರೆ.

RELATED ARTICLES

Related Articles

TRENDING ARTICLES