Sunday, August 24, 2025
Google search engine
HomeUncategorizedಜನಾಕ್ರೋಶ ಯಾತ್ರೆಗೆ ಜನರ ಬೆಂಬಲ ಇಲ್ಲ; ವಿಜಯೇಂದ್ರ ವಿರುದ್ದ ಯತ್ನಾಳ್​ ವಾಗ್ದಾಳಿ

ಜನಾಕ್ರೋಶ ಯಾತ್ರೆಗೆ ಜನರ ಬೆಂಬಲ ಇಲ್ಲ; ವಿಜಯೇಂದ್ರ ವಿರುದ್ದ ಯತ್ನಾಳ್​ ವಾಗ್ದಾಳಿ

ಬೆಂಗಳೂರು : ಬೆಲೆ ಏರಿಕೆ ವಿರುದ್ದ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಜನಾಕ್ರೋಶ ಯಾತ್ರೆಯ ಬಗ್ಗೆ ಶಾಸಕ ಯತ್ನಾಳ್​ ವಾಗ್ದಾಳಿ ನಡೆಸಿದ್ದು. ವಿಜಯೇಂದ್ರ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಹೇಳಿದರು.

ಬಿಜೆಪಿಯಿಂದ ಉಚ್ಚಾಟನೆಯಾದ ನಂತರ ಯತ್ನಾಳ್​ ತಮ್ಮದೇ ಸ್ವಂತ ಪಕ್ಷ ಕಟ್ಟುವ ನಿರ್ಧಾರ ಮಾಡಿದ್ದು. ರಾಜ್ಯದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆಯ ಬಗ್ಗೆ ಯತ್ನಾಳ್​ ಮಾತನಾಡಿದ್ದು. ” ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿದೆ. ಜನಾಕ್ರೋಶ ಯಾತ್ರೆಗೆ ಆರ್ ಅಶೋಕ, ಅಶ್ವಥ್ ನಾರಾಯಣ ಬರುತ್ತಿಲ್ಲಾ. ಪ್ರಮುಖರು ಯಾರೂ ಬರುತ್ತಿಲ್ಲ, ಶ್ರೀರಾಮುಲು ಕಾಟಾಚಾರಕ್ಕೆ ಬರುತ್ತಾರೆ.
ವಿಜಯೇಂದ್ರ ಮೇಲೆ ಎಲ್ಲರಿಗೂ ಬೇಸರವಿದೆ.

ಇದನ್ನೂ ಓದಿ :UPSC ಪರೀಕ್ಷೆ ಫಲಿತಾಂಶ ಪ್ರಕಟ: 13 ಲಕ್ಷ ಅಭ್ಯರ್ಥಿಗಳಲ್ಲಿ 1009 ಜನರಿಗೆ ಅದೃಷ್ಟ

ವಿಜಯಪುರದಲ್ಲಿ ಜನಕ್ರೋಶ ಯಾತ್ರೆಗೆ 10ಸಾವಿರ ಜನರನ್ನು ಸೇರಿಸುತ್ತೇವೆ ಎಂದು ಹೇಳಿದ್ದರು, ಆದರೆ ಇಲ್ಲಿಯೂ ಜನರನ್ನು ಸೇರಿಸಲು ಸಾಧ್ಯವಾಗಿಲ್ಲ. ಇಡೀ ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ಫೇಲ್ ಆಗಿದೆ.
ಇದು ವಿಜಯೇಂದ್ರ ಕುರ್ಚಿ ಉಳಿಸುವ ಯಾತ್ರೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಯತ್ನಾಳ್ ಮಾತು..!

ಕೇಂದ್ರದಲ್ಲಿ ಸಚಿವರಾಗಿರುವವನ್ನು ರಾಜ್ಯಾದ್ಯಕ್ಷರನ್ನಾಗಿ ಮಾಡಲಾಗುತ್ತದೆ ಪ್ರಶ್ನೆಗೆ ಉತ್ತರಿಸಿದ ಶಾಸಕ “ಪಕ್ಷದಲ್ಲಿ ಏನು ನಡೆದಿದೆ ಎಂಬುದು ಗೊತ್ತಿಲ್ಲ. ನಾನು ಪಕ್ಷದಿಂದ ಉಚ್ಛಾಟನೆಯಾದ ಬಳಿಕ ಯಾರ ಸಂಪರ್ಕದಲ್ಲಿಲ್ಲಾ‌.
ನಾಣು ರಾಜ್ಯದಲ್ಲಿ ಓಡಾಡುತ್ತಿದ್ದೇನೆ. ಹಳ್ಳಿ ಹಳ್ಳಿಯಲ್ಲಿ ನನಗೆ ಉತ್ತಮ ಬೆಂಬಲ ಸಿಗುತ್ತದೆ. ನಿಮ್ಮ ನಿರ್ಣಯಕ್ಕೆ ಬದ್ದವೆಂದು ಜನರು ಹೇಳುತ್ತಿದ್ದಾರೆ. ಹಿಂದುತ್ವ ಉಳಿಯುವಂತ ನಿರ್ಣಯ ಮಾಡಬೇಕೆಂದು ಹೇಳುತ್ತಿದ್ದಾರೆ.

ಇದನ್ನೂ ಓದಿ :ಅಕ್ರಮ ಸಂಬಂಧ: ಮದುವೆ ಮಾಡಿಕೋ ಎಂದಿದ್ದಕ್ಕೆ ಪ್ರಿಯತಮೆಗೆ ಗುಂಡಿ ತೋಡಿದ ಖದೀಮ

ರಾಜ್ಯದಲ್ಲಿ ಜನರು ಮೂರು ರಾಜಕೀಯ ಪಕ್ಷಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ನಾನು ವಿಜಯದಶಮಿಯವರೆಗೂ ರಾಜ್ಯ ಸುತ್ತುತ್ತೇನೆ. ನಾಳೆ ಹಾವೇರಿಯಲ್ಲಿ ಈಶ್ವರಪ್ಪ ಹಾಗೂ ನಾನು ಸಮಾವೇಶ ಮಾಡುತ್ತಿದ್ದೇವೆ. ಹಿಂದೂ ಯುವತಿಯರ ಮೇಲೆ ದೌರ್ಜನ್ಯವಾಗುತ್ತಿದೆ. ಅತ್ಯಾಚಾರ, ಲವ್ ಜಿಹಾದ್ ಇವೆಲ್ಲ ಖಂಡಿಸಿ ಸಮಾವೇಶ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳ ರಕ್ಷಣೆ ಮಾಡಲಾಗುತ್ತಿಲ್ಲಾ.
ಸರ್ಕಾರ ಒಂದೊಂದು ಸಮುದಾಯಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಯತ್ನಾಳ್​ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments