ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿರುವ ರೆಸಾರ್ಟ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು. ಈ ದಾಳಿಯಲ್ಲಿ ಕನಿಷ್ಟ 12 ಪ್ರವಾಸಿಗರು ಗಾಯಗೊಂಡಿದ್ದು. ಓರ್ವ ಪ್ರವಾಸಿಗ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್-ಎ-ತೋಯ್ಬ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.
ಅಧಿಕಾರಿಗಳ ಪ್ರಕಾರ, ಭಯೋತ್ಪಾದಕರು ಸುಮಾರು 3 ರಿಂದ 5 ನಿಮಿಷಗಳ ಕಾಲ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸುಮಾರು 12 ಜನರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ, ಅವರನ್ನು ಅನಂತ್‌ನಾಗ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿ ಹೆಚ್ಚಿನ ವಿವರಗಳು ಹೊರಬರುತ್ತಿದ್ದಂತೆ ಗಾಯಾಳುಗಳ ಸಂಖ್ಯೆ ಹೆಚ್ಚಾಗಬಹುದು. ರಕ್ಷಣಾ ಮತ್ತು ವೈದ್ಯಕೀಯ ತಂಡಗಳು ಸ್ಥಳದಲ್ಲಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಇದನ್ನೂ ಓದಿ :ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್; ತಪ್ಪಿತು ಭಾರೀ ದುರಂತ
ದಾಳಿಯ ಬಗ್ಗೆ ತಿಳಿಯುತ್ತಿದ್ದಂತೆ ಸೇನ ಪಡೆಗಳು ಕಾರ್ಯಚರಣೆಗೆ ಇಳಿದಿದ್ದು. ಭಾರತೀಯ ಸೇನೆಯ ವಿಕ್ಟರ್ ಫೋರ್ಸ್, ವಿಶೇಷ ಪಡೆಗಳು, ಜೆಕೆಪಿ ಸೋಜಿ ಮತ್ತು ಸಿಆರ್‌ಪಿಎಫ್ 116 ಬೆಟಾಲಿಯನ್ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಗಾಯಗೊಂಡವರ ಪಟ್ಟಿ..!
- ವಿನೋ ಭಟ್, ಗುಜರಾತ್ ನಿವಾಸಿ
- ಮಾಣಿಕ್ ಪಾಟೀಲ್
- ರಿನೋ ಪಾಂಡೆ
- ಎಸ್.ಬಾಲಚಂದ್ರು, ಮಹಾರಾಷ್ಟ್ರ ನಿವಾಸಿ
- ಡಾ. ಪರಮೇಶ್ವರ್
- ಅಭಿಜೀವನ್ ರಾವ್, ಕರ್ನಾಟಕದ ನಿವಾಸಿ
- ಅಭಿಜ್ಞಾ ರಾವ್, ಕರ್ನಾಟಕದ ನಿವಾಸಿ
- ಸಾಹಸಿ ಕುಮಾರಿ, ಒರಿಸ್ಸಾ ನಿವಾಸಿ