ಬೀದರ್ : ಎಸ್ಎಸ್‌ಎಲ್‌ಸಿ ಪರೀಕ್ಷೆ ಮುಗಿದು ಉತ್ತರ ಪತ್ರಿಕೆಗಳ ಮೌಲ್ಯಮಾಪ ನಡೆಯುತ್ತಿದೆ. ಇದರ ನಡುವೆ ವಿದ್ಯಾರ್ಥಿಯೊಬ್ಬ ತನ್ನ ಉತ್ತರಪತ್ರಿಕೆಯಲ್ಲಿ ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ ಬ್ಲಾಕ್ಮೇಲ್ ಮಾಡಿದ್ದು. ಹಿಂದಿ ವಿಷಯದಲ್ಲಿ 80/80 ಅಂಕ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದೀಗ ಈ ಪತ್ರ ವೈರಲ್ ಆಗಿದೆ.
ಬೀದರ್‌ನಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷಾ ಮೌಲ್ಯಮಾಪನದ ವೇಳೆ ಈ ವಿಚಿತ್ರ ಬರಹ ಪತ್ತೆಯಾಗಿದ್ದು. ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ ಪತ್ರವೊಂದನ್ನು ಬರೆದಿದ್ದಾನೆ.
ಇದನ್ನೂ ಓದಿ :‘ನಾನ್ ಮಾಡಿದ್ದು ತಪ್ಪು, ಸಾಧ್ಯವಾದರೆ ನನ್ನನ್ನು ಕ್ಷಮಿಸಿ’: ತಂದೆ ಬಳಿ ಕ್ಷಮೆಯಾಚಿಸಿದ ಪೃಥ್ವಿ ಭಟ್
‘ಹಿಂದಿ ವಿಷಯದಲ್ಲಿ ನನಗೆ 80/80 ಅಂಕ ಕೊಡಿ, ಇಲ್ಲದಿದ್ರೆ ನನ್ನ ಮರ್ಯಾದೆ ಹೋಗುತ್ತೆ. ಒಂದು ವೇಳೆ ಈ ವಿಷಯದಲ್ಲಿ ಪೂರ್ಣ ಅಂಕ ಪಡೆಯದಿದ್ದರೆ ನನ್ನ ತಂದೆ, ತಾಯಿ ಮತ್ತು ಟೀಚರ್ ನನ್ನನ್ನು ಅಗೌರವದಿಂದ ನೋಡುತ್ತಾರೆ. ಅದನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಸತ್ತು ಹೋಗುತ್ತೇನೆ ಎಂದು ಬರೆದಿದ್ದಾನೆ. ಇದೀಗ ಈ ಪತ್ರ ವೈರಲ್ ಆಗಿದೆ.