ಗದಗ : ಅಮೇರಿಕಾದ ಬೋಸ್ಟನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾರತದ ಚುನಾವಣಾ ಆಯೋಗದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ರಾಜ್ಯಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದು. ಪುಣ್ಯಾತ್ಮ ರಾಹುಲ್ ಗಾಂಧಿಗೆ ಹೊರದೇಶದಲ್ಲಿ ಹೇಗೆ ನಡೆದುಕೊಳ್ಳಬೇಕೂ ಎಂಬ ಕನಿಷ್ಟ ಸೌಜನ್ಯವಿಲ್ಲ ಎಂದು ಹೇಳಿದ್ದಾರೆ.
ಗದಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ‘ಪುಣ್ಯಾತ್ಮ ರಾಹುಲ್ ಗಾಂಧಿಗೆ ಹೊರದೇಶದಲ್ಲಿ ಭಾರತದ ಗೌರವ ತೆಗೆಯದ ರೀತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಸೌಜನ್ಯ ಇಲ್ಲ.
ಅಲ್ಲಿ ನಿಂತು ಭಾರತದ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾತಾಡ್ತಾರೆ. ಸಂವಿಧಾನಾತ್ಮಕ ಸಂಸ್ಥೆಯಾದ ಚುನಾವಣಾ ಆಯೋಗದ ಬಗ್ಗೆ ಟೀಕೆ ಮಾಡ್ತಾರೆ.
ಇದನ್ನೂ ಓದಿ :ಹಿಂದಿ ವಿಷಯದಲ್ಲಿ 80/80 ಅಂಕ ನೀಡದಿದ್ದರೆ ಸೂಸೈಡ್ ಮಾಡಿಕೊಳ್ಳುತ್ತೇನೆ: ವಿದ್ಯಾರ್ಥಿ ಬೆದರಿಕೆ
ಮಹರಾಷ್ಟ್ರ ಚುನಾವಣೆಯಲ್ಲಿ ಅವರಿಗೆ ಹಿನ್ನಡೆ ಆಗಿದೆ. ಆದರೆ ಪಾರ್ಲಿಮೆಂಟ್ಲ್ಲಿ, ನಮ್ಮ ದೇಶದಲ್ಲಿ ಈ ಕುರಿತು ಮಾತನಾಡಬೇಕೂ. ಮಹರಾಷ್ಟ್ರದಲ್ಲಿ ಚುನಾವಣಾ ಆಯೋಗ ಬಿಜೆಪಿಗೆ ಸಹಕಾರ ಕೊಟ್ಟಿದೆ ಅಂದ್ರೆ ತೆಲಂಗಾಣದಲ್ಲೂ ಹೀಗೆ ಮಾಡಬಹುದಿತ್ತು. ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬಹುದಿತ್ತು. ಹಿಮಾಚಲ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಒಂದು ಮಾನದಂಡ. ಮಹಾರಾಷ್ಟ್ರ, ಹರಿಯಾಣದಲ್ಲಿ ಚುನಾವಣೆ ಸೋತಾಗ ಇವರಿಗೆ ಚುನಾಣಾ ಆಯೋಗದ ಬಗ್ಗೆ ಅನುಮಾನಗಳು ಪ್ರಾರಂಭ ಆಗುತ್ತೆ ಎಂದು ಹೇಳಿದರು.