ಕಲಬುರಗಿ : ಅಕ್ರಮ ಸಂಬಂಧಕ್ಕೆ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಂದಲೇ ಕೊಲೆಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಮೃತ ಮಹಿಳೆಯನ್ನು ಆರತ @ ಗುಂಡಮ್ಮ ಎಂದು ಗುರುತಿಸಲಾಗಿದೆ. ಇನ್ನು ಕೊಲೆ ಮಾಡಿದ ಕಿರಾತಕನನ್ನು ಶಿವಾನಂದ ಎಂದು ಗುರುತಿಸಲಾಗಿದೆ.
ಕೊಲೆಯಾಗಿರುವ ಆರತಿ ಮತ್ತು ಶಿವು ಇಬ್ಬರು ಕಲಬುರಗಿಯ ಕಾಳಗಿ ತಾಲ್ಲೂಕಿನ ಹೆಬ್ಬಾಳ ಗ್ರಾಮದವರಾಗಿದ್ದಾರೆ. ಆರತಿ ವಿವಾಹಿತ ಮಹಿಳೆಯಾಗಿದ್ದಳು. ಕಳೆದ 13 ವರ್ಷದ ಹಿಂದೆಯೇ ಗುಜರಾತ್ ಮೂಲದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು. ಆದರೆ 13 ವರ್ಷ ಕಳೆದರು ಆರತಿಗೆ ಮಕ್ಕಳಾಗಿರಲಿಲ್ಲ. ಗುಜರಾತ್ನಲ್ಲಿ ಇರಲಾಗದೇ ಆರತಿ ಕಲಬುರಗಿಗೆ ಬಂದು ನೆಲೆಸಿದ್ದಳು. ಗಂಡನೂ ಮೂರ್ನಾಲ್ಕು ತಿಂಗಳಿಗೊಮ್ಮೆ ಬಂದು ಹೆಂಡತಿಯನ್ನು ನೋಡಿಕೊಂಡು ಹೋಗುತ್ತಿದ್ದ.
ಇದನ್ನೂ ಓದಿ :ಭಾಷೆ ವಿಚಾರಕ್ಕೆ ಇತರರ ಮೇಲೆ ಹಲ್ಲೆ ಮಾಡುವ ಸಣ್ಣತನ ಕನ್ನಡಿಗರದ್ದಲ್ಲ: ಸಿಎಂ ಸಿದ್ದರಾಮಯ್ಯ
ಆದರೆ ಕಳೆದ 6-7 ವರ್ಷದಿಂದ ಆರತಿ ಮತ್ತು ಅದೇ ಗ್ರಾಮದ ಶಿವಾನಂದ ಇಬ್ಬರು ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಇತ್ತೀಚೆಗೆ ಆರತಿ ಮದುವೆ ಮಾಡಿಕೊಳ್ಳುವಂತೆ ಶಿವನಂದನಿಗೆ ಒತ್ತಾಯಿಸುತ್ತಿದ್ದಳು. ಆರತಿಯ ಮದುವೆ ಕಾಟಕ್ಕೆ ಬೇಸತ್ತಿದ್ದ ಶಿವನಂದ ಆರತಿಯನ್ನು ಮುಗಿಸಲು ಪ್ಲಾನ್ ರೂಪಿಸಿದ್ದ. ಇದೇ ಏಪ್ರಿಲ್ 5 ರಂದು ಶಿವಾನಂದ ತನ್ನ ಸ್ನೇಹಿತನ ಏರ್ಟಿಗಾ ಕಾರ್ ನಲ್ಲಿ ಆರತಿಯನ್ನ ಬೆಳಿಗ್ಗೆ ಮನೆಯಿಂದ ದೇವಲ ಗಾಣಗಾಪುರಕ್ಕೆ ಕರೆದುಕೊಂಡು ಹೋಗಿ ದತ್ತಾತ್ರೇಯ ದೇವರ ದರ್ಶನ ಮಾಡಿಸಿ, ವಾಪಸ್ ಕಲಬುರಗಿಗೆ ಕರೆದುಕೊಂಡು ಬಂದಿದ್ದಾನೆ.
ಬಳಿಕ ಸಂಜೆ ಹುಮನಾಬಾದ್ ಮಾರ್ಗದ ಕಿಣ್ಣಿಸಡಕ್ ಗ್ರಾಮದ ಹೊರವಲಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಏರ್ಟಿಗಾ ಕಾರ್ನಲ್ಲಿಯೇ ಆರತಿ ಮೂಗು, ಬಾಯಿ ಮುಚ್ಚಿ ಉಸಿರು ಗಟ್ಟಿಸಿ ಕೊಲೆಗೈದಿದ್ದಾನೆ. ಕೊಲೆ ಬಳಿಕ ಆರತಿಯ ಮೊಬೈಕ್, ಆಭರಣಗಳನ್ನು ತೆಗೆದುಕೊಂಡಿದ್ದಾನೆ. ಬಳಿಕ ಜಮೀನಿನಲ್ಲಿ ಗಡ್ಡೆಹಾಕಿದ್ದ ತೊಗರಿ ಕೊಯ್ಲಿನಲ್ಲಿ ಆರತಿ ಶವ ಇಟ್ಟು ಬೆಂಕಿ ಹಚ್ಚಿ ಶಿವಾನಂದ ಎಸ್ಕೇಪ್ ಆಗಿದ್ದಾನೆ. ಮಾರನೇ ದಿನ ಸ್ಥಳೀಯರು ನೋಡಿದಾಗ ಮಹಿಳೆ ಕೊಲೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ :ಗತಿ ಇಲ್ಲದೆ ಕರ್ನಾಟಕಕ್ಕೆ ಬಂದಿರುವ ನೀವೂ ಕನ್ನಡ ಕಲಿಯಲ್ಲ ಅಂದ್ರೆ ಹೇಗೆ: ಪ್ರತಾಪ್ ಸಿಂಹ
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು. ಘಟನಾ ಸ್ಥಳಕ್ಕೆ ಕಮಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಪೊಲೀಸರು ಮಹಿಳೆ ಗುರುತು ಪತ್ತೆ ಹಚ್ಚಿ, ಕೊಲೆಗಡುಕ ಆರೋಪಿ ಶಿವಾನಂದ ನನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಕೊಲೆ ಮಾಡಿ ಆರತಿ ಮೈಲೆಲಿದ್ದ ತಾಳಿ, ಕಾಲುಂಗರು, ಮೊಬೈಲ್, ಕಾಲಿನ ಚೈನ್, ಬೆಳ್ಳಿಯ ಬಳೆ, ಕಿವಿಯೋಲೆ ಹಾಗು ಕೃತ್ಯಯಕ್ಕೆ ಬಳಸಿದ್ದ ಏರ್ಟಿಗಾ ಕಾರ್ ನ್ನ ಪೊಲೀಸರು ವಶಪಡೆಸಿಕೊಂಡಿದ್ದಾರೆ.