ಬೆಂಗಳೂರು : ಕರ್ನಾಟಕ ಹೈಕೋರ್ಟ್ ನಾಲ್ವರು ನ್ಯಾಯಮೂರ್ತಿಗಳು ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ಬೇರೆ ಬೇರೆ ರಾಜ್ಯದ ಒಟ್ಟು ಏಳು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲಾಗಿದೆ.
ಸುಪ್ರೀಂಕೋರ್ಟ್ ಕೊಲಿಜಿಯಂನಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಹಿನ್ನಲೆ ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಲಾಗಿದೆ. ನ್ಯಾಯದ ಆಡಳಿತದ ಗುಣಮಟ್ಟವನ್ನು ಬಲಪಡಿಸುವ ಉದ್ದೇಶಕ್ಕೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ :ರಾಮಾಯಣ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ಮಹಾದೇವನ ಆರ್ಶೀವಾದ ಪಡೆದ ನಟ ಯಶ್
ಕರ್ನಾಟಕ ಹೈಕೋರ್ಟ್‌ನಿಂದ ವರ್ಗಾವಣೆಯಾದ ನ್ಯಾಯಾಧೀಶರು
- ನ್ಯಾ. ಹೇಮಂತ್ ಚಂದನ ಗೌಡರ್: ಕರ್ನಾಟಕ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆ
- ನ್ಯಾ.ಕೃಷ್ಣನ್ ನಟರಾಜನ: ಕರ್ನಾಟಕ ಹೈಕೋರ್ಟ್‌ನಿಂದ ಕೇರಳ ಹೈಕೋರ್ಟ್‌ಗೆ ವರ್ಗಾವಣೆ
- ನ್ಯಾ. ಎನ್. ಶ್ರೀನಿವಾಸ ಸಂಜಯ್ ಗೌಡ: ಕರ್ನಾಟಕ ಹೈಕೋರ್ಟ್‌ನಿಂದ ಗುಜರಾತ್ ಹೈಕೋರ್ಟ್‌ಗೆ ವರ್ಗಾವಣೆ
- ನ್ಯಾ.ಕೃಷ್ಣ ದೀಕ್ಷಿತ್: ಕರ್ನಾಟಕ ಹೈಕೋರ್ಟ್‌ನಿಂದ ಒಡಿಶಾ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದಾರೆ.
ಇನ್ನು ಕರ್ನಾಟಕ ಹೈಕೋರ್ಟ್‌ಗೆ ಹೊಸದಾಗಿ ಇಬ್ಬರು ನ್ಯಾಯಾಧೀಶರು ವರ್ಗಾವಣೆಯಾಗಿದ್ದು.
- ನ್ಯಾ.ಪೆರುಗು ಶ್ರೀಸುಧ: ತೆಲಂಗಾಣ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ
- ನ್ಯಾ.ಡಾ.ಕೆ.ಮನ್ಮಧ ರಾವ್: ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದಾರೆ.‘
- ನ್ಯಾ.ಕೆ.ಸುರೇಂದರ್: ತೆಲಂಗಾಣ ಹೈಕೋರ್ಟ್‌ನಿಂದ ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದಾರೆ.