Tuesday, April 22, 2025

ಕೃಷ್ಣ ದೇವರಾಯರ ಸಮಾಧಿ ಮೇಲೆ ಮಾಂಸ ಸ್ವಚ್ಚತೆ: ಯತ್ನಾಳ್​ ಆಕ್ರೋಶ​

ಕೊಪ್ಪಳ: ಐದನೂರು ವರ್ಷದ ಇತಿಹಾಸ ಇರೋ ಶ್ರೀಕೃಷ್ಣ ದೇವರಾಯನ ನೆನಪಿಗಾಗಿ ನಿರ್ಮಿಸಿರುವಂತ ಸ್ಮಾರಕದಲ್ಲಿ ಸ್ಥಳೀಯರು ಕುರಿಯನ್ನು ನೇತುಹಾಕಿ ಮಾಂಸ ತೆಗೆಯುವ ವಿಡಿಯೋ ಒಂದು ವೈರಲ್ ಆಗಿತ್ತು. ಇದೀಗ ಇದಕ್ಕೆ ಬಸವರಾಜ ಯತ್ನಾಳ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬರುವ ಆನೆಗೊಂದಿಯಲ್ಲಿ ಅಂದಿನ ಹಂಪಿ ಸಾಮ್ರಾಜ್ಯದ ರಾಜನಾದ ಶ್ರೀ ಕೃಷ್ಟ ದೇವರಾಯರ ನೆನಪಿಗಾಗಿ ತುಂಗಭದ್ರಾ ನದಿಯ ದಡದಲ್ಲಿ 64 ಕಂಬಗಳ ಮಂಟಪವನ್ನು ನಿರ್ಮಿಸಲಾಗುತ್ತು. ಆದರೆ ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಐತಿಹಾಸಿಕ ಸ್ಮಾರಕದಲ್ಲಿ ಕುರಿಯನ್ನು ನೇತುಹಾಕಿ ಕುರಿಯ ಮಾಂಸ ಸ್ವಚ್ಚಗೊಳಿಸಲು ಬಳಸಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು. ಇದನ್ನೂ ಓದಿ :ಭೀಕರ ರಸ್ತೆ ಅಪಘಾತ: ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆ ಸಾ*ವು

ಸ್ಥಳೀಯರ ಈ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಬಸವರಾಜ ಯತ್ನಾಳ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ ರಾಜ್ಯಸರ್ಕಾರದ ಬೇಜವಬ್ದಾರಿತನದ ವಿರುದ್ಧ ಕಿಡಿಕಾರಿದ್ದಾರೆ.ಇನ್ನೂ ವಿಡಿಯೋ ನೋಡಿ ಸ್ಥಳೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮಂದಿ ಪುರಾತತ್ತ್ವ ಶಾಸ್ತ ಇಲಾಖೆ ವಿರುದ್ಧವೂ ಕಿಡಿಕಾರಿದ್ದಾರೆ. ಇಲಾಖೆ ಸೂಕ್ತ ರೀತಿಯ ಭದ್ರತೆ ಒದಗಿಸಿ ಐತಿಹಾಸಿಕ ಸ್ಮಾರಕ ಕಾಪಡುವ ಕೆಲಸ ಮಾಡಬೇಕಿತ್ತು. ಆನೆಗೊಂದಿ ಭಾಗದಲ್ಲಿ ಇಂತಹ ನೂರಾರು ಐತಿಹಾಸಿಕ ಸ್ಮಾರಕಗಳಿವೆ. ಎಲ್ಲ ಸ್ಮಾರಕಗಳು ಕೂಡ ಪುಂಡಪೊಕಿರಿಗಳ ಹಾವಳಿಗೆ ತುತ್ತಾಗಿವೆ.

ಇದನ್ನೂ ಓದಿ :ಸರಿಗಮಪ ಖ್ಯಾತಿಯ ಪೃಥ್ವಿ ಭಟ್​ ವಿವಾಹ: ವಶೀಕರಣ ಮಾಡಿದ್ದಾರೆ ಎಂದು ಆರೋಪಿಸಿದ ತಂದೆ

ಸಂಜೆ ಆದರೆ ಕುಡಕರ ಅಡ್ಡಗಳಾಗಿ ಮಾರ್ಪಾಡಾಗುವ ಐತಿಹಾಸಿಕ ಸ್ಮಾರಕಗಳು ಕತ್ತಲಲ್ಲಿ ಅನೈತಿಕ ಚಟುವಟಿಕೆಯ ತಾಣವಾಗುತ್ತಿವೆ‌. ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತು ಸೂಕ್ತ ಭದ್ರತೆ ವಹಿಸಿ ಮುಂದಿನ ಪಿಳಿಗೆಗೆ ಐತಿಹಾಸಿಕ ಸ್ಮಾರಕಗಳನ್ನು ನೋಡಲು ಉಳಿಸಿಕೊಳ್ಳುವ ಯತ್ನ ಮಾಡಬೇಕು ಎಂದು ಸ್ಥಳೀಯ ಯುವಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES