ಮೈಸೂರು : ನಂಜನಗೂಡು ಪಟ್ಟಣದಲ್ಲಿ ಭೀಕರ ಅಪಘಾತ ಜರುಗಿದ್ದು, ಅಕ್ಕಿ ಸಾಗಾಣಿಕೆಯ ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆಯೋಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ಜರುಗಿದೆ.
ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ 30 ವರ್ಷದ ಭವಾನಿ ಸಾವನ್ನಪ್ಪಿದ ಮಹಿಳೆಯಾಗಿದ್ದು, ಅಪಘಾತದಲ್ಲಿ ಗಂಡ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಆರ್‌ಪಿ ರಸ್ತೆಯ 15ನೇ ತಿರುವಿನಲ್ಲಿ ಸರಿ ಸುಮಾರು ಮಧ್ಯಹ್ನಾ 12 ಗಂಟೆ ಹೊತ್ತಿಗೆ ಈ ಘಟನೆ ಜರುಗಿದ್ದು, ಲಾರಿ ಚಕ್ರಕ್ಕೆ ಸಿಲುಕಿದ ಭವಾನಿಯ ಮೆದುಳು ಛಿದ್ರ ಛಿದ್ರವಾಗಿದೆ. ಇದನ್ನೂ ಓದಿ :ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ವಿವಾಹ: ವಶೀಕರಣ ಮಾಡಿದ್ದಾರೆ ಎಂದು ಆರೋಪಿಸಿದ ತಂದೆ
ಗಂಡ ಮಹೇಶ್ ಜೊತೆ ಚಕ್ರ ವಾಹನದಲ್ಲಿ ಬದನವವಾಳುವಿನಿಂದ ನಂಜನಗೂಡಿಗೆ ಆಗಮಿಸುತ್ತಿದ್ದ ವೇಳೆ ಆಯಾತಪ್ಪಿ ಬಿದ್ದ ಭವಾನಿ ಲಾರಿ ಕೆಳಗೆ ಬಿದ್ದಿದ್ದು. ಅಕ್ಕಿ ಸಾಗಾಣೆ ಮಾಡುತ್ತಿದ್ದ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ಭವಾನಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಅಪಘಾತ ಜರುಗಿದ ಸ್ಥಳದಲ್ಲಿ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು. ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಇದನ್ನೂ ಓದಿ :ಭಾರತೀಯ ಯೋಧನ ಮೇಲೆ ಮಾರಣಾಂತಿಕ ಹಲ್ಲೆ: ‘ಕರ್ನಾಟಕ ಏಕೆ ಹೀಗಾಯಿತು’ ಎಂದು ಪ್ರಶ್ನಿಸಿದ ಸೈನಿಕ
ಘಟನಾ ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಲಾರಿಯನ್ನು ವಶಕ್ಕೆ ಪಡೆದಿರುವ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.