Monday, April 21, 2025

ರಾಮಾಯಣ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ಮಹಾದೇವನ ಆರ್ಶೀವಾದ ಪಡೆದ ನಟ ಯಶ್​

ಮಧ್ಯಪ್ರದೇಶ : ಖ್ಯಾತ ನಟ ಯಶ್​ ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು. ರಾಮಾಯಣ ಸಿನಿಮಾ ಶೂಟಿಂಗ್​ಗೂ ಮುನ್ನ ಯಶ್​ ಮಹಾದೇವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮಧ್ಯಪ್ರದೇಶದ ಸಿಎಂ ಮೋಹನ್​ ಯಾದವ್​ರನ್ನು ಕೂಡ ಯಶ್​ ಭೇಟಿಯಾಗಿದ್ದಾರೆ.

ಸದ್ಯ ಯಶ್ ‘ರಾಮಾಯಣ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿರುವ ಯಶ್​. ಚಿತ್ರೀಕರಣಕ್ಕೂ ಮುನ್ನ ಶಿವನ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನದ ಬಳಿನ ನಟ ಮಾತನಾಡಿ, ಬಹಳ ಖುಷಿ ಆಗುತ್ತಿದೆ. ಶಿವನ ಆಶೀರ್ವಾದ ಪಡೆಯಲು ಬಂದೆ.

ನಾನು ಚಿಕ್ಕಂದಿನಿಂದ ಶಿವನ ದೊಡ್ಡ ಭಕ್ತ. ನಾವು ಮನೆದೇವರು ಎಂದು ಕರೆಯುತ್ತೇನೆ. ನಮ್ಮ ಕುಲದೇವರು ಶಿವ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ದೇವರ ಸನ್ನಿಧಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಾಗ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಅದ್ಭುತ ಅನುಭವ ಸಿಕ್ಕಿದೆ ಎಂದು ಯಶ್ ಹೇಳಿದರು.

ಇದನ್ನೂ ಓದಿ :ಸಂವಿಧಾನದ ಬಗ್ಗೆ ಮಾತನಾಡುವ ಸರ್ಕಾರ ಧಾರ್ಮಿಕ ಹಕ್ಕಿನ ಹರಣ ಮಾಡಿದೆ: ಸುಬುಧೇಂದ್ರ ತೀರ್ಥ ಶ್ರೀಗಳು

ಇದೇ ವೇಳೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರನ್ನು ಯಶ್​ ಭೇಟಿಯಾಗಿದ್ದು. ಇದರ ಪೋಟೊಗಳು ವೈರಲ್​ ಆಗಿವೆ.

 

RELATED ARTICLES

Related Articles

TRENDING ARTICLES