ಬೆಂಗಳೂರು : ಗಬ್ಬರ್ ಸಿಂಗ್ ಬಗ್ಗೆ ಮಂಗಳವಾರ ಮಾತಾಡ್ತೀನಿ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಶಾಸಕ ಮುನಿರತ್ನ ವಿರುದ್ಧ ಮಾತಾಡಿದ್ದಾರೆ.
ಆರ್ಆರ್ ನಗರದಲ್ಲಿ ಶೋಲೆ ಸಿನಿಮಾದ ರೀತಿ ಪ್ಲೆಕ್ಸ್ ಕುರಿತು ಗಬ್ಬರ್ ಸಿಂಗ್, ಅಮಿತಾಬ್ ಬಚ್ಚನ್, ಹೇಮಮಾಲಿನಿ ಎಂದು ಬಿಜೆಪಿ ಶಾಸಕ ಮುನಿರತ್ನ ವ್ಯಂಗ್ಯ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು, ಗಬ್ಬರ್ ಸಿಂಗ್ ಬಗ್ಗೆ ಮಂಗಳವಾರ ಮಾತಾಡ್ತೀನಿ, ಅವನಿಗೆ ಏನೇನು ಹೇಳಬೇಕು ಹೇಳ್ತೀನಿ. ಆ ಗಬ್ಬರ್ ಸಿಂಗ್ ಹೇಳಿದ್ದಕ್ಕೆ ಮಾಧ್ಯಮದವರು ಇಷ್ಟು ಎಕ್ಸೈಟ್ ಆದ್ರೆ ಹೇಗೆ? ಆ ಚಾರ್ಜ್ಶೀಟ್ನಲ್ಲಿರುವ ರಿಪೋರ್ಟ್ ತಂದು ಓದಬಾರದಾ?ಇಷ್ಟು ದಿನ ಓದಿರಲಿಲ್ಲ, ಇವತ್ತು ಅಥವಾ ನಾಳೆ ತರಿಸುತ್ತೇನೆ. ಅರ್ಧ ಗಂಟೆ ಓದಿ ಆಮೇಲೆ ಹೇಳ್ತೀನಿ ಎಂದರು.
ಹೇಳಲಿ ಅಂತ ಕಾಯ್ತಾ ಇದ್ದೆ, ಹೇಳಿದ್ದಾನೆ. ಇಷ್ಟು ದಿನ ನಾನು ಬಾಯಿ ಓಪನ್ ಮಾಡಿರಲಿಲ್ಲ, ಈಗ ಓಪನ್ ಮಾಡ್ತೀನಿ. ನಾನು ಏನಾದ್ರೂ ಮಾತಾಡಿದ್ನಾ? ಮುನಿರತ್ನ ಕಲಾವಿದ, ಕಲಾವಿದ ಸಂಘದ ಅಧ್ಯಕ್ಷ, ಡೈರೆಕ್ಟರ್, ನಿರ್ಮಾಪಕ ಎಂದು ಹೇಳಿದರು.
ಇದೇ ವೇಳೆ ಜಾತಿಗಣತಿ ಬಗ್ಗೆ ಮಾತಾಡಿದ ಅವರು, ಜಾತಿಗಣತಿಗೆ ಸದ್ಯ ವಿರಾಮ ಕೊಟ್ಟಿದ್ದಾರಲ್ಲ, ನೋಡಿ ನಂತರ ಮಾತನಾಡುತ್ತೇನೆ. ಜಾತಿಗಣತಿ ಅಂತ ಆಗೋಗಿದೆ. ಆದರೆ, ಇದು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಜೊತೆ 56 ಅಂಶಗಳ ಮೇಲೆ ಸಮೀಕ್ಷೆ ಮಾಡಿದ್ದಾರೆ ಎಂದು ಡಿ.ಕೆ ಸುರೇಶ್ ಅವರು ತಿಳಿಸಿದರು.