ಬೆಂಗಳೂರು : ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ವಿರುದ್ದ ಮಾಜಿ ಸಚಿವ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದು. ಕೇಂದ್ರ ಸರ್ಕಾರ ತಂದಿರುವ ವಕ್ಫ್ ಕಾಯ್ದೆ ಅಸಂವಿಧಾನಿಕವಾಗಿದೆ. ಭಾರತ ಸರ್ಕಾರ ತಂದಿರುವ ಈ ಕಾಯ್ದೆ ಭಾರತದಲ್ಲಿ ನಿಲ್ಲೋದಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ಕಾಯ್ದೆ ಬಗ್ಗೆ ಮಾಧ್ಯಮ ಸುದ್ದಿಗೋಷ್ಟಿ ನಡೆಸಿದ ಸಿಎಂ ಇಬ್ರಾಹಿಂ ‘ಕೇಂದ್ರ ಸರ್ಕಾರ ತಂದಿರುವ ಈ ಕಾಯ್ದೆ ಅಸಂವಿಧಾನಿಕವಾಗಿದೆ. ನೀವು ತಂದಿರುವ ಕಾನೂನು ಜನಹಿತವಾಗಿರಬೇಕು. ಯಾರಾದರೂ ವಕ್ಪ್ ಅಸ್ತಿ ಮಿಸ್ ಯೂಸ್ ಮಾಡಿದ್ರೆ ಅದಕ್ಕೆ ಕಠಿಣ ಶಿಕ್ಷೆಯಾಗುವ ಕಾನೂನು ತನ್ನಿ. ಅದಕ್ಕೆ ಬೇಕಾದ ಕಠಿಣ ಕ್ರಮ ಜರುಗಿಸಿ ಎಂದು ಕೇಂದ್ರ ಸರ್ಕಾರಕ್ಕೆ ಇಬ್ರಾಹಿಂ ಮನವಿ ಮಾಡಿದರು. ಇದನ್ನೂ ಓದಿ :ಜನಿವಾರ ಜಟಾಪಟಿ; ಸರ್ಕಾರಕ್ಕೆ ಸಲಹೆ ಕೊಟ್ಟ ಸಿದ್ದಲಿಂಗ ಸ್ವಾಮೀಜಿಗಳು
ಮುಂದುವರಿದು ಮಾತನಾಡಿದ ಸಿಎಂ ಇಬ್ರಾಹಿಂ ‘ಸಾಕಷ್ಟು ವಿರೋಧದ ಮಧ್ಯೆ ಭಾರತ ಸರ್ಕಾರ ವಕ್ಫ್ ಕಾಯ್ದೆ ತಂದಿದೆ. ಈ ಕಾಯ್ದೆ ಜನವಿರೋಧಿಯಾಗಿದೆ. ಹಿಂದೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಂದಿದ್ದರು. ಬಳಿಕ ವಿರೋಧ ಬಂದ ಮೇಲೆ ವಾಪಸ್ ತೆಗೆದುಕೊಂಡರು. ವಕ್ಫ್ ಕಾಯ್ದೆ ಒಂದು ಧರ್ಮಕ್ಕೆ ಸಂಬಂಧಿಸಿದ್ದು.
ದೇವರ ಹೆಸರಲ್ಲಿ ದಾನ ಮಾಡಿದ್ದು. ದಾನ ಕೊಟ್ಟವರ ಹಕ್ಕು. ಮುಟ್ಟುಗೋಲು ಆಗಬಾರದು ಮತ್ತು ಬೋರ್ಡ್ ಲ್ಲಿ ಅನ್ಯಧರ್ಮಿಯರಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ಉಡುಪಿ ಮಠ, ತಿರುಪತಿ ದೇವಾಲಯದಲ್ಲಿ ಮುಸ್ಲಿಂರಿಗೆ ಅವಕಾಶ ನೀಡುತ್ತೀರ.
ಇದನ್ನೂ ಓದಿ :ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದ ಕಾಮುಕ ಅರೆಸ್ಟ್
ಸುಪ್ರೀಂಕೋರ್ಟ್ ವಕ್ಫ್ ಕಾಯ್ದೆ ಕುರಿತು ಮೂಲಭೂತ ಪ್ರಶ್ನೆ ಎತ್ತಿದೆ. ನ್ಯಾಯಾಲಯ ಜೀವಂತ ಇದೆ ಅನ್ನೋದಕ್ಕೆ ಇದು ಸಾಕ್ಷಿ. ನ್ಯಾಯಾಲಯದಿಂದಲೂ ಒಮ್ಮೊಮ್ಮೆ ತಪ್ಪೊಪ್ಪಿಗೆ ಆಗುತ್ತದೆ. ಈಗಲೂ ನಾನು ಕೇಂದ್ರಕ್ಕೆ ಮನವಿ ಮಾಡುತ್ತೇನೆ.. ವಕ್ಫ್ ಬೋರ್ಡ್ ನಲ್ಲಿ ಏನಾದರೂ ತಪ್ಪಾಗಿದರೆ ಜೀವಾವದಿ ಶಿಕ್ಷೆ ಮಾಡಿ. ಈಗ ದೇಶದಲ್ಲಿ ನೀವು ಬಹುಸಂಖ್ಯಾತರಾಗಿದ್ದೀರ. ನೀವೇ ಖಾಯಂ ಇರಲ್ಲ. ಭಾರತ ಸರ್ಕಾರ ತಂದ ಈ ಕಾಯ್ದೆ ಭಾರತದಲ್ಲಿ ನಿಲ್ಲೋದಿಲ್ಲ. ಹೋಗುವಾಗ ಒಳ್ಳೆಯ ಹೆಸರು ಪಡೆದು ಹೋಗಿ ಎಂದು ಸಿಎಂ ಇಬ್ರಾಹಿಂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.