ಬೀದರ್ : ಜನಿವಾರ ಧರಿಸಿ K-CET ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಕಾಲೇಜು ಆಡಳಿತ ಮಂಡಳಿ ಪರೀಕ್ಷೆ ಬರೆಯಲು ಅವಕಾಶ ನೀಡಲು ನಿರಾಕರಿಸಿರುವ ಘಟನೆ ಬೀದರ್ನಲ್ಲಿ ನಡೆದಿದೆ. ಮೊದಲ ಎರಡು ಪರೀಕ್ಷೆಗೆ ಅವಕಾಶ ನೀಡಿದ್ದು. ಏಪ್ರೀಲ್ 17ರಂದು ನಡೆದ ಗಣಿತ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದಾರೆ.
ಬೀದರ್ ನಗರದ ಚೌಬಾರ ನಿವಾಸಿ ಸುಚಿವ್ರತ್ ಕುಲಕರ್ಣಿ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು. ಸುಚಿವ್ರತ್ ಜನಿವಾರ ಹಾಕಿಕೊಂಡೆ ಏಪ್ರೀಲ್.16 ರಂದು ಅದೇ ಪರೀಕ್ಷಾ ಕೇಂದ್ರದಲ್ಲಿ ಭೌತಶಾಸ್ತ್ರ ಹಾಗೂ ರಾಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದನು. ಅದೇ ರೀತಿ ಏಪ್ರೀಲ್ 17ರಂದು ವಿದ್ಯಾರ್ಥಿ ಗಣಿತ ಪರೀಕ್ಷೆಗೆ ಹಾಜರಾಗಿದ್ದನು.
ಇದನ್ನೂ ಓದಿ :ಪ್ರೀತಿಸಿ ಮದುವೆಯಾದರೂ ತಪ್ಪದ ವರದಕ್ಷಿಣೆ ಕಿರುಕುಳ; ನವವಿವಾಹಿತೆ ಆತ್ಮಹ*ತ್ಯೆ
ಈ ವೇಳೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿದ್ಯಾರ್ಥಿಗೆ ಜನಿವಾರ ತೆಗೆದು ಪರೀಕ್ಷಾ ಕೊಠಡಿಯೊಳಗೆ ಹೋಗಲು ಸೂಚಿಸಿದ್ದಾರೆ. ಆದರೆ ವಿದ್ಯಾರ್ಥಿ ಕಳೆದ ದಿನ ನಡೆದ ಪರೀಕ್ಷೆಗೆ ಜನಿವಾರ ಧರಿಸಿ ಹಾಜರಾಗಿದ್ದೇನೆ. ಈಗಲೂ ಅದಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದನು. ಆದರೆ ಇದಕ್ಕೆ ಒಪ್ಪದ ಸಿಬ್ಬಂದಿಗಳು ” ಜನಿವಾರ ದಾರದಿಂದ ಏನಾದರು ಮಾಡಿಕೊಂಡರೆ ಯಾರು ಹೊಣೆ , ಜನಿವಾರ ದಾರ ತೆಗೆಯುವಂತೆ ಸೂಚಿಸಿದ್ದಾರೆ. ಆದರೆ ವಿದ್ಯಾರ್ಥಿ ಇದಕ್ಕೆ ನಿರಾಕರಿಸಿದ್ದಾನೆ.
ಘಟನೆ ಕುರಿತು ವಿದ್ಯಾರ್ಥಿಯ ತಾಯಿ ಕಾಲೇಕು ಆಡಳಿತ ಮಂಡಳಿ ಬಗ್ಗೆ ಅಸಮಧಾನ ಹೊರಹಾಕಿದ್ದು. ಪರೀಕ್ಷ ಕೇಂದ್ರದ ಸಿಬ್ಬಂದಿಗಳಿಂದ ಮಗನ ಒಂದು ವರ್ಷದ ಜೀವನ ಹಾಳಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.