Saturday, April 19, 2025

ಪಂದ್ಯ ಸೋತು ಬೇಸರದಲ್ಲಿದ್ದ ಇಶಾನ್​ ಕಿಶಾನ್​ರನ್ನು ಸಮಾಧಾನ ಪಡಿಸಿದ ನೀತಾ ಅಂಬಾನಿ

ಬೆಂಗಳೂರು : ಗುರುವಾರ ನಡೆದ ಸನ್​ರೈಸರ್ಸ್​ ಹೈದರಬಾದ್ ಮತ್ತು ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ಗೆದ್ದು ಬೀಗಿದೆ. ಆದರೆ ಈ ಪಂದ್ಯದಲ್ಲಿ ಕೇವಲ 2 ರನ್​ಗಳಿಸಿ ಔಟ್​ ಆಗಿದ್ದ ಹೈದರಬಾದ್​ ತಂಡದ ಆಟಗಾರರ ಇಶಾನ್​ ಕಿಶಾನ್​ರನ್ನು ಮುಂಬೈ ತಂಡದ ಒಡತಿ ನೀತಾ ಅಂಭಾನಿ ಸಮಾಧಾನ ಪಡಿಸಿದರು.

ಐಪಿಎಲ್ 2025 ರಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಕೇವಲ 162 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸುಲಭ ಮೊತ್ತವನ್ನು ಬೆನ್ನತ್ತಿದ ಮುಂಬೈ ತಂಡ 19 ಓವರ್​ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ :ಶೀತ ಆಗಿದೆ ಎಂದು ಆಸ್ಪತ್ರೆಗೆ ಬಂದಿದ್ದ 5 ವರ್ಷದ ಬಾಲಕನಿಗೆ ಸಿಗರೇಟ್ ಸೇದಿಸಿದ ವೈದ್ಯ

ಆದರೆ ಈ ಪಂದ್ಯದಲ್ಲಿ ಮಾಜಿ ಮುಂಬೈ ಇಂಡಿಯನ್ಸ್​ ಆಟಗಾರ ಇಶಾನ್ ಕಿಶಾನ್​ ತೀರಾ ಕಳಪೆ ಪ್ರದರ್ಶನ ತೋರಿಸಿದ್ದರು. ಕಳೆದ 7 ವರ್ಷಗಳಿಂದ ಮುಂಬೈ ತಂಡದ ಪರ ಆಡುತ್ತಿದ್ದ ಇಶಾನ್​ ಕಿಶಾನ್​​ರನ್ನು ಹೈದರಬಾದ್​ ತಂಡ ಭಾರಿ ಮೊತ್ತಕ್ಕೆ ಖರೀದಿಸಿತ್ತು. ಆದರೆ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಇಶಾನ್ ನಂತರ ಪಂದ್ಯಗಳಲ್ಲಿ ಡಲ್​ ಹೊಡೆದಿದ್ದರು. ಅದೇ ರೀತಿ ನೆನ್ನೆಯೂ ತಮ್ಮ ಕಳಪೆ ಬ್ಯಾಟಿಂಗ್ ಮುಂದವರಿಸಿದ ಇಶಾನ್ ಕೇವಲ 2ರನ್​ಗಳಿಗೆ ಔಟಾದರು.

ಇದನ್ನೂ ಓದಿ :ಜನಿವಾರ ಜಟಾಪಟಿ; ಸರ್ಕಾರಕ್ಕೆ ಸಲಹೆ ಕೊಟ್ಟ ಸಿದ್ದಲಿಂಗ ಸ್ವಾಮೀಜಿಗಳು

ಪಂದ್ಯದ ನಂತರ, ಆಟಗಾರರು ಕೈಕುಲುಕುತ್ತಾ ತಮ್ಮ ತಮ್ಮ ಡಗೌಟ್ ಕಡೆಗೆ ಹೋಗುತ್ತಿದ್ದರು. ಇಶಾನ್ ಕಿಶನ್ ಸಪ್ಪೆ ಮೋರೆ ಹಾಕಿದ್ದರು. ಈ ಸಂದರ್ಭ ಕಿಶನ್, ನೀತಾ ಅಂಬಾನಿ ಬಳಿಗೆ ಹೋಗಿ ಅವರನ್ನು ನಗುತ್ತಾ ಸ್ವಾಗತಿಸಿದರು. ನೀತಾ ಕೂಡ ಇಶಾನ್​ಗೆ ಪ್ರೀತಿಯಿಂದ ಪ್ರತಿಕ್ರಿಯಿಸಿ ಅವನ ಕೆನ್ನೆ ತಟ್ಟಿ ಸಮಾಧಾನ ಮಾಡುತ್ತಿರುವಂತೆ ಕಂಡುಬಂತು. ಇಶಾನ್ ಮುಂಬೈ ಮಾಲೀಕರೊಂದಿಗೆ ಕೆಲ ಸಮಯ ಮಾತನಾಡಿ ನಂತರ ಹೈದರಾಬಾದ್ ತಂಡಕ್ಕೆ ಮರಳಿದರು.

RELATED ARTICLES

Related Articles

TRENDING ARTICLES