ಹುಬ್ಬಳ್ಳಿ : ಶ್ರೀರಾಮಸೇನೆಯಿಂದ ಹಮ್ಮಿಕೊಂಡಿದ್ದ ತ್ರಿಶೂಲ ದೀಕ್ಷೆ ಹಾಗೂ ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಮುಸ್ಲಿಂರ ವಿರುದ್ದ ನಾಲಿಗೆ ಹರಿಬಿಟ್ಟಿದ್ದು. ಮುಸ್ಲಿಂರು ಭಾರತವನ್ನು ಪಾಕಿಸ್ತಾನ ಮಾಡಲು ಹೊರಟ್ಟಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯ ನೇಹಾ ಹೀರೇಮಠ ಕೊಲೆಯಾಗಿ ಇಂದಿಗೆ ಒಂದು ವರ್ಷವಾಗಿದ್ದು. ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ಮತ್ತು ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮೋಧ್ ಮುತಾಲಿಕ್ ನಾಲಿಗೆ ಹರಿಬಿಟ್ಟಿದ್ದಾರೆ. “ಮುಸ್ಲಿಂರು ಇಡೀ ದೇಶವನ್ನ ಪಾಕಿಸ್ತಾನ ಮಾಡಲು ಹೊರಟಿದ್ದಾರೆ, ನಮ್ಮ ದೇಶವನ್ನ ಅಲ್ಲಾನ ಕೈಗೆ ಕೊಡೋಕೆ ಹೊರಟ್ಟಿದ್ದಾರೆ. ನಮ್ಮ ಜಾಗವನ್ನ ಕಬಳಿಸ್ತಾ ಇದ್ದಾರೆ, 9 ಲಕ್ಷ ಎಕರೆ ಜಾಗವನ್ನ ವಕ್ಫ್ ಎಂದು ಮಾಡಿಕೊಂಡಿದ್ದಾರೆ. ಇದರಲ್ಲಿ 5 ಪಾಕಿಸ್ತಾನ ಮತ್ತು 10 ಬಾಂಗ್ಲದೇಶ ಆಗುತ್ತೆ.
ಇದನ್ನೂ ಓದಿ :ಕ್ಯಾಬಿನೆಟ್ ಸಭೆಯಲ್ಲಿ ಹೊಡೆದಾಡಿಕೊಳ್ಳುವ ಮಟ್ಟಿಗೆ ಜಗಳವಾಗಿದೆ: ಆರ್.ಅಶೋಕ್
ಈ ಜಾಗವನ್ನ ಮಕ್ಕಾ-ಮದಿನಾದಿಂದ ತೆಗೆದುಕೊಂಡು ಬಂದ್ರಾ..? ಈ ಎಲ್ಲ ಜಾಗ ನಮ್ಮದು. ಮುಸ್ಲಿಂರು ಜನಸಂಖ್ಯೆ, ಜಮೀನು ಜಾಸ್ತಿ ಮಾಡಿ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡೋಕೆ ಹೊರಟ್ಟಿದ್ದಾರೆ. ಜನಸಂಖ್ಯೆ ಹೆಚ್ಚು ಮಾಡಲು ಐದೈದು ಮದುವೆ ಆಗ್ತಾ ಇದ್ದಾರೆ. ಮುಸ್ಲಿಂರಿಗೆ ಹಂದಿ ಕಂಡ್ರೆ ಆಗೋದಿಲ್ಲ. ಯಾಕಂದ್ರೆ ಹಂದಿ ಜನ್ಮನೀಡುವ ಹಾಗೆ ಅವರು ಮಕ್ಕಳನ್ನು ಹುಟ್ಟಿಸುತ್ತಾರೆ. ನಿಮಗೆ ಮಗುವಿನ ಚಿಂತೆ ಆದರೆ ನಮಗೆ ದೇಶದ ಚಿಂತೆಯಾಗಿದೆ. ನೀವು ಡಜನ್ ಗಟ್ಟಲೆ ಮಕ್ಕಳನ್ನು ಹುಟ್ಟಿಸಿ, ನಾವು ಸಾಕುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ :ಪಂದ್ಯ ಸೋತು ಬೇಸರದಲ್ಲಿದ್ದ ಇಶಾನ್ ಕಿಶಾನ್ರನ್ನು ಸಮಾಧಾನ ಪಡಿಸಿದ ನೀತಾ ಅಂಬಾನಿ
ಮುಂದುವರಿದು ಮಾತನಾಡಿದ ಪ್ರಮೋದ್ ಮುತಾಲಿಕ್ ‘ ನಮಗೆ ನಾಲ್ಕು ಋಣಗಳನ್ನು ತೀರಿಸುವ ಕರ್ತವ್ಯವಿದೆ.ತಂದೆ-ತಾಯಿ, ಶಿಕ್ಷಣ ಕೊಟ್ಟ ಗುರುಗಳು, ಸಮಾಜ ಹಾಗೂ ದೇಶದ ಋಣ ತೀರಿಸಬೇಕು. ಮಾತೃ-ಪಿತೃ ದೇವೋಭವ ಅನ್ನೋದನ್ನ ನಾವು ಉಳಿಸಬೇಕು. ದೇಶದ ಋಣ ತೀರಿಸೋದು ಬಹಳ ಮುಖ್ಯ. ಪಾಕಿಸ್ತಾನ್, ಬಾಂಗ್ಲಾ ನಮ್ಮ ಮುಂದೆ ಉದಾಹರಣೆ ಇದೆ. 1947ಕ್ಕಿಂತ ಮುಂಚೆ ಈ ದೇಶಗಳು ಇರಲಿಲ್ಲ, ಆದರೆ ನಮ್ಮ ನಾಯಕರ ದೌರ್ಬಲ್ಯದಿಂದ ನಿರ್ಮಾಣ ಆಯ್ತು.ಈ ದೇಶಗಳಲ್ಲೂ ದೇವಸ್ಥಾನಗಳಿದ್ದವು, ಹಿಂದೂಗಳಿದ್ದರು, ಆದರೆ ಎರಡು ದೇಶಗಳಾದ ಮೇಳೆ 20 ಲಕ್ಷ ಜನರ ಕಗ್ಗೊಲೆ ಆಯ್ತು ಎಂದು ಹೇಳಿದರು.