ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಜಾತಿಗಣತಿ ವರದಿ ಕಿಚ್ಚು ಹೆಚ್ಚಾಗಿದ್ದು. ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಜಾತಿ ಜನಗಣತಿ ವರದಿ ಸ್ವೀಕಾರಕ್ಕೆ 10 ವರ್ಷದ ಸಮಯ ಹಿಡಿದಿದೆ. ಇದನ್ನು ಜಾರಿ ಮಾಡಲು ಇನ್ನು ಒಂದು ವರ್ಷವಾಗುತ್ತದೆ ಎಂದು ಹೇಳಿದರು.
ಜಾತಿಜನಗಣತಿ ವರದಿ ರಾಜ್ಯದಲ್ಲಿ ಕಿಚ್ಚೆಬ್ಬಿಸಿದ್ದು. ಇದರ ಕುರಿತು ನೆನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲೂ ಯಾವುದೇ ನಿರ್ಣಯ ಅಂಗೀಕಾರವಾಗಿಲ್ಲ, ಸಚಿವ ಸಂಪುಟ ಸಭೆಯಲ್ಲಿ ಸ್ವಪಕ್ಷದ ಸಚಿವರ ನಡುವೆಯೇ ವಾಗ್ವಾದವಾಗಿದೆ ಎಂದು ತಿಳಿದು ಬಂದಿದ್ದು. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಚರ್ಚಿಸುವುದಾಗಿ ಕಾನೂನು ಸಚಿವ ಎಚ್.ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ :ಚೀನಾಗೆ ರಫ್ತು ಮಾಡಲು ಸಂಗ್ರಹಿಸಿಟ್ಟಿದ್ದ 400 ಕೆಜಿ ಕೂದಲು ಕಳ್ಳತನ
ಜಾತಿಗಣತಿ ವರದಿಯ ಕುರಿತು ಸಚಿವ ಎಚ್.ಕೆ ಪಾಟೀಲ್ ಹೇಳಿಕೆ ನೀಡಿದ್ದು. ಜಾತಿಗಣತಿ ವರದಿ ಎಂಬುದು ಬಹಳ ಜಟಿಲ ಸಮಸ್ಯೆಯಾಗಿದೆ. ಇದರ ಬಗ್ಗೆ ಇನ್ನು ಬಹಳಷ್ಟು ಚರ್ಚೆಯಾಗಬೇಕಿದೆ. ಹೀಗಾಗಿ ಈ ವರದಿಯನ್ನು ಅಂಗೀಕರಿಸಲು ಇನ್ನು ಒಂದು ವರ್ಷ ಸಮಯವಾಗಬಹುದು. ವರದಿ ಸ್ವೀಕಾರಕ್ಕೆ 10 ವರ್ಷ ಸಮಯ ತೆಗೆದುಕೊಂಡಿದೆ. ವರದಿ ಅಂಗೀಕರಿಸಲು ಸಮಯವಿಡಿಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ :ಜನಿವಾರ ಧರಿಸಿದಕ್ಕೆ ಪರೀಕ್ಷೆ ಕೊಡಲ್ಲ ಎಂದ ಸಿಬ್ಬಂದಿ; ವಿದ್ಯಾರ್ಥಿ ತಾಯಿ ಕಣ್ಣೀರು
ಜಾತಿ ಜನಗಣತಿಯ ಅಂಕಿ ಸಂಖ್ಯೆಯನ್ನು ಜನರೇ ಬರೆಸಿದ್ದಾರೆ. ಈ ವರದಿಗೆ ಯಾರೂ ಸಹಿ ಮಾಡಿದ್ದಾರೋ, ಅವರೇ ಇದೀಗ ವರದಿಯ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಈ ವರದಿ ಕುರಿತು ಸಮಗ್ರ ಚರ್ಚೆಯಾಗಬೇಕು, ಆಗ ಮಾತ್ರ ಇದಕ್ಕೆ ಪರಿಹಾರ ಸಿಗುತ್ತದೆ. ಸಾದರ ಸಮಾಜದ ಜನರನ್ನು ಕಡಿಮೆ ಎಂದು ತೋರಿಸಲಾಗಿದೆ. ಸಾದರ ಜನರು ಕೇವಲ 64 ಸಾವಿರ ಎಂದು ತೋರಿಸಿದ್ದಾರೆ. ಆದರೆ ಅವರು ಮೂರು ಜಿಲ್ಲೆಯಲ್ಲಿದ್ದಾರೆ. ಹೀಗಾಗಿ ಅವರು ಧ್ವನಿ ಎತ್ತಿದ್ದಾರೆ. ಈ ಎಲ್ಲಾ ಅಂಕಿ ಅಂಶಗಳನ್ನು ಸರಿ ಮಾಡಲು ಅವಕಾಶ ನೀಡಬೇಕಿದೆ ಎಂದು ಹೇಳಿದರು.