Saturday, April 19, 2025

ಶೀತ ಆಗಿದೆ ಎಂದು ಆಸ್ಪತ್ರೆಗೆ ಬಂದಿದ್ದ 5 ವರ್ಷದ ಬಾಲಕನಿಗೆ ಸಿಗರೇಟ್ ಸೇದಿಸಿದ ವೈದ್ಯ

ಉತ್ತರಪ್ರದೇಶ : ಶೀತ ಆಗಿದೆ ಎಂದು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ 5 ವರ್ಷದ ಮಗುವಿಗೆ ವೈದ್ಯನೊಬ್ಬ ಸಿಗರೇಟ್​ ಸೇದಿಸಿದ್ದು. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಉತ್ತರ ಪ್ರದೇಶದ ಜಲೌನ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶೀತ ಮತ್ತು ಕೆಮ್ಮಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮುಗ್ದ ಹುಡುಗನಿಗೆ ಇಲ್ಲಿಯ ವೈದ್ಯನೊಬ್ಬ ಸಿಗರೇಟ್​ ಸೇದುವಂತೆ ಮಾಡಿದ್ದು. ಮಗುವಿನ ಬಾಯಿಗೆ ಸಿಗರೇಟ್​ ಇಟ್ಟು ಸೇದುವಂತೆ ಪ್ರಚೋದನೆ ನೀಡಿದ್ದಾನೆ. ಘಟನೆ ಸಂಬಂಧ ವಿಡಿಯೋ ವೈರಲ್​ ಆಗಿದ್ದು. ಈ ವಿಷಯ ತಿಳಿಯುತ್ತಿದ್ದಂತೆ ಮುಖ್ಯ ವೈದ್ಯಾಧಿಕಾರಿಗಳು ವೈದ್ಯನ ವಿರುದ್ದ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದಾರೆ.

ಇದನ್ನೂ ಓದಿ :ಭಾರತ ಸರ್ಕಾರ ತಂದ ವಕ್ಫ್​ ಕಾಯ್ದೆ ಭಾರತದಲ್ಲಿ ‌ನಿಲ್ಲೋದಿಲ್ಲ: ಸಿಎಂ ಇಬ್ರಾಹಿಂ

ಮಾಹಿತಿಯ ಪ್ರಕಾರ, ಐದು ವರ್ಷದ ಮಗುವೊಂದು ತನ್ನ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಜಲೌನ್ ಜಿಲ್ಲೆಯ ಕುಥೌಂಡ್ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಕ್ಕೆ ಬಂದಿತ್ತು. ಅಲ್ಲಿ ವೈದ್ಯನಾಗಿದ್ದ ಸುರೇಶ್​ ಚಂದ್ರ ಎಂಬ ವೈದ್ಯ ಮಗುವಿಗೆ ಸಿಗರೇಟ್​ ಸೇದುವುದನ್ನು ತರಬೇತಿ ನೀಡಿದ್ದಾನೆ. ಮೊದಲು ಅವನೇ ಸಿಗರೇಟ್​ ಸೇದಿ ನಂತರ ಮಗುವಿನ ಬಾಯಿಗೆ ಸಿಗರೇಟ್​ ಇಟ್ಟು ಸೇದಲು ಹೇಳಿದ್ದಾನೆ.

ವೈದ್ಯನ ಸಲಹೆ ಮೇರೆಗೆ ಮಗು ಸಿಗರೇಟ್​ ಸೇದಲು ಯತ್ನಿಸಿದೆ. ಆದರೆ ಅದು ಸಾಧ್ಯವಾಗದ ಕಾರಣ ವೈದ್ಯ ಇಂದಿಗೆ ಇಷ್ಟು ಸಾಕು. ನಾಳೆ ಬಾ ಇನ್ನಷ್ಟು ಕಲಿಸುತ್ತೇನೆ ಎಂದು ಹೇಳಿದ್ದಾನೆ. ಈ ಘಟನೆಯಲ್ಲಿ ಅಲ್ಲಿದ್ದ ಜನರು ತಮ್ಮ ಮೊಬೈಲ್ ಕ್ಯಾಮಾರದಲ್ಲಿ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ :ಜನಿವಾರ ಜಟಾಪಟಿ; ಸರ್ಕಾರಕ್ಕೆ ಸಲಹೆ ಕೊಟ್ಟ ಸಿದ್ದಲಿಂಗ ಸ್ವಾಮೀಜಿಗಳು

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವಿಷಯ ತೀವ್ರಗೊಂಡಿತು. ಇದಾದ ನಂತರ, ಆರೋಪಿ ಡಾ. ಸುರೇಶ್ ಚಂದ್ರನನ್ನು ಬೇರೆ ಕಡೆಗೆ ವರ್ಗಾಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮುಖ್ಯ ವೈದ್ಯಾಧಿಕಾರಿ ಎನ್.ಡಿ. ಶರ್ಮಾ ಮಾತನಾಡಿ, ಈ ವಿಡಿಯೋ ಸುಮಾರು 15 ದಿನಗಳಷ್ಟು ಹಳೆಯದು. ಇದರ ಬಗ್ಗೆ ಕ್ರಮ ಕೈಗೊಂಡು, ACMO (ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ) ಅವರಿಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES