ಬೆಂಗಳೂರು: ಮಹಿಳೆಯರಿಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆಯುತ್ತಿದ್ದ ಕಾರ್ತಿಕ್ ಎಂಬ ವಿಕೃತ ಕಾಮುಕನನ್ನು ಶಿವಾಜಿನಗರ ಪೊಲೀಸರು ಬಂದಿಸಿದ್ದಾರೆ.
ಕಳೆದ ಏಪ್ರೀಲ್ 13ರಂದು ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಕಾರ್ತಿಕ್ ಎಂಬ ಬೀದಿ ಕಾಮಣ್ಣ, ಊಟ ಮುಗಿಸಿ ಮಲಗಲು ಎಂದು ಹೋಗುತ್ತಿದ್ದ ಮಹಿಳೆಗೆ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದನು. ಇದನ್ನು ಪ್ರಶ್ನೆ ಮಾಡಿದ್ದ ಮಹಿಳೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಅಷ್ಟೇ ಅಲ್ಲದೆ ಜಗಳ ಬಿಡಿಸಲು ಬಂದವರ ಮೇಲೂ ಸೈಕೋ ಹಲ್ಲೆ ನಡೆಸಿದ್ದನು. ಇದನ್ನೂ ಓದಿ :ಜಾತಿಗಣತಿ ವರದಿ ಜಾರಿ ಮಾಡಲು ಇನ್ನು ಒಂದು ವರ್ಷವಾಗುತ್ತೆ : ಸತೀಶ್ ಜಾರಕಿಹೊಳಿ
ಎರಡನೇ ಮಹಡಿಯಿಂದ ಹಾಲೋಬ್ಲಾಕ್, ಹೂವಿನ ಪಾಟ್ ಅನ್ನು ಕೆಳಮಹಡಿಯಲ್ಲಿದ್ದವರ ಮೇಲೆ ಎಸೆದಿದ್ದ. ಬುದ್ಧಿ ಹೇಳಲು ಹೋಗಿದ್ದವರ ಮೇಲೆಯೂ ಹಲ್ಲೆ ಮಾಡಿದ್ದ. ಅಷ್ಟೇ ಅಲ್ಲದೆ ಬುದ್ದಿ ಹೇಳಿದ್ದ ತಾಯಿಯ ಮೇಲೂ ಹಲ್ಲೆ ನಡೆಸಿದ್ದನು. ಈತನಿಂದ ಹಲ್ಲೆಗೊಳಗಾಗಿದ್ದವರಲ್ಲಿ ಓರ್ವ ವ್ಯಕ್ತಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ :ಚೀನಾಗೆ ರಫ್ತು ಮಾಡಲು ಸಂಗ್ರಹಿಸಿಟ್ಟಿದ್ದ 400 ಕೆಜಿ ಕೂದಲು ಕಳ್ಳತನ