ಬೆಂಗಳೂರು: ಚೀನಾ, ಬರ್ಮಾ ಮತ್ತು ಹಾಂಕ್ಕಾಂಗ್ ದೇಶಗಳಿಗೆ ರಫ್ತು ಮಾಡಲು ಎಂದು ಸಂಗ್ರಹಿಸಿಟ್ಟಿದ್ದ 400 ಕೆಜಿ ತಲೆ ಕೂದಲನ್ನ ಖದೀಮರು ಎಗರಿಸಿದ್ದು. ಕಳ್ಳತನವಾಗಿರುವ ಕೂದಲು ಮೌಲ್ಯ ಒಟ್ಟು 25 ಲಕ್ಷ ಎನ್ನಲಾಗಿದೆ. ಕೂದಲು ಕಳ್ಳತನದ ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಸಾಮಾನ್ಯವಾಗಿ ಚಿನ್ನ, ಬೆಳ್ಳಿ, ಬೈಕ್, ಕಾರು ಕಳ್ಳತನ ಮಾಡುವ ಕಳ್ಳರನ್ನ ನೋಡಿರುತ್ತೇವೆ. ಕೊನೆಗೆ ಬಸ್ನಲ್ಲಿ ಪಿಕ್ಪಾಕೆಟ್ ಮಾಡುವ ಚೋರರನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಖರ್ತನಾಖ್ ಗ್ಯಾಂಗ್ ಲಕ್ಷಾಂತರ ರೂಪಾಯಿ ಮೌಲ್ಯದ ಮಹಿಳೆಯರ ತಲೆ ಕೂದಲನ್ನು ಕಳ್ಳತನ ಮಾಡಿದ್ದು. ಬರೋಬ್ಬರು 400 ಕೆಜಿ ತಲೆ ಕೂದಲನ್ನು ಎಗರಿಸಿ ಪರಾರಿಯಾಗಿದ್ದಾರೆ. ಇದನ್ನೂ ಓದಿ:ಜನಿವಾರ ತೆಗೆಸಿ CET ಪರೀಕ್ಷೆಗೆ ಅವಕಾಶ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ
ಬೆಂಗಳೂರಿನ, ಸೋಲದೇವನಹಳ್ಳಿಯ, ಲಕ್ಷ್ಮೀಪುರ ಕ್ರಾಸ್‌ನಲ್ಲಿ ಘಟನೆ ನಡೆದಿದ್ದು. ಮಾ.1 ರಂದು ಲಕ್ಷ್ಮೀಪುರ ಕ್ರಾಸ್‌ನಲ್ಲಿರುವ ಗೋದಾಮಿನಿಂದ ಆರೋಪಿ ಯಲ್ಲಪ್ಪ ಸೇರಿದಂತೆ ಐದು ಜನರ ತಂಡ, ಗೋದಾಮಿನ ಬೀಗ ಮುರಿದು ಕೂದಲು ಕಳ್ಳತನ ಮಾಡಿದ್ದಾರೆ. ಗೂಡ್ಸ್ ವಾಹನದ ಮೂಲಕ ಸುಮಾರು 25 ಲಕ್ಷ ರೂ. ಬೆಲೆಬಾಳುವ 400 ಕೆ.ಜಿ ಕೂದಲನ್ನು ಕದ್ದು ಪರಾರಿಯಾಗಿದ್ದರು.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ; ಕುರಿಸಂತೆಗೆ ಹೋಗುತ್ತಿದ್ದ ನಾಲ್ವರು ಸಾವಿನ ಮನೆಗೆ
ಈ ಕುರಿತು ಗೋದಾಮಿನ ಮಾಲೀಕ ವೆಂಕಟರಮಣ ಕಳ್ಳತನ ಕುರಿತು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಆರೋಪಿಗಳು ಕದ್ದ ಕೂದಲನ್ನು ಚನ್ನರಾಯಪಟ್ಟಣ ಹಾಗೂ ಆಂಧ್ರಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ. ಸದ್ಯ ಐದು ಜನರ ಪೈಕಿ ಯಲ್ಲಪ್ಪ ಪೊಲೀಸರು ಬಲೆಗೆ ಬಿದ್ದಿದ್ದು, ಉಳಿದ ನಾಲ್ಕು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.