ಮಂಗಳೂರು : ಉಳ್ಳಾಲದಲ್ಲಿ ಹೊರ ರಾಜ್ಯದ ಯುವತಿ ಮೇಲೆ ಗ್ಯಾಂಗ್ರೇಪ್ ನಡೆಸಿರುವ ಶಂಕೆ ವ್ಯಕ್ತವಾಗಿದ್ದು. ಅರೆಪ್ರಜ್ಞಾ ಸ್ಥಿತಿಯಲ್ಲಿ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ. ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಸ್ವಸ್ಥವಾಗಿರುವ ಯುವತಿಯನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕುತ್ತೂರು ಕೋಡಿ ಎಂಬಲ್ಲಿ ಅರೆಪ್ರಜ್ಞಾ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದು. ಯುವತಿಯನ್ನು ರಕ್ಷಣೆ ಮಾಡಿರುವ ಪ್ರವೀಣ್ ಎಂಬಾತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯ ನಿವಾಸಿಯಾಗಿರುವ ಪ್ರವೀಣ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು. “ನಿನ್ನೆ ಮಧ್ಯರಾತ್ರಿ 12:30ಕ್ಕೆ ಯುವತಿ ಬಾಗಿಲು ತಟ್ಟಿದ್ದಾಳು, ಎದ್ದು ಹೋಗಿ ಬಾಗಿಲು ತೆಗೆದಾಗ ಕುಡಿಯೋದಕ್ಕೆ ನೀರು ಕೇಳಿದಳು. ಆಕೆಯ ಕುತ್ತಿಗೆ ಸೇರಿದಂತೆ ಮೈಮೇಲೆ ಗಾಯವಿತ್ತು.
ಇದನ್ನೂ ಓದಿ : ಅವನ್ಯಾವನೋ ಚಂಗ್ಲು ರೇಪ್ ಮಾಡಿ, ರಾಜ್ಯಪಾಲರಿಗೆ ಅರ್ಜಿ ಕೊಟ್ಟವ್ನೆ; ಡಿ.ಕೆ ಶಿವಕುಮಾರ್
ಆಕೆಯ ಬಳಿ ಕೇಳಿದ್ದಕ್ಕೆ “ಆಟೋ ರಿಕ್ಷಾದಲ್ಲಿ ಯಾರೋ ನನ್ನನ್ನು ಕರ್ಕೊಂಡು ಬಂದು ಬಿಟ್ಟು ಹೋಗಿರೋದಾಗಿ ಹೇಳಿದ್ದಾಳೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದು. ಊರು ಯಾವುದು ಎಂದು ಕೇಳಿದ್ದಕ್ಕೆ ಉತ್ತರಪ್ರದೇಶ ಎಂದಿಳು. ಇದನ್ನು ತಿಳಿದ ಬಳಿಕ ಕೂಡಲೇ ಪೊಲೀಸರಿಗೆ ಕರೆ ಮಾಡಿದೆವು ಎಂದು ಪ್ರವೀಣ್ ತಿಳಿಸಿದ್ದಾರೆ.
ಇನ್ನು ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ದಾಖಲು ಮಾಡಿದ್ದು. ಘಟನಾ ಸ್ಥಳಕ್ಕೆ ಫಾರೆನ್ಸಿಕ್ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಸಂತ್ರಸ್ಥ ಯುವತಿಯಿಂದ ಹಿರಿಯ ಪೊಲೀಸರು ಮಾಹಿತಿ ಪಡೆದಿದ್ದು. ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ.