Friday, May 9, 2025

ನೆನ್ನೆ ಜೈಲ್​, ಇಂದು ಬೇಲ್​; ರೀಲ್ಸ್​ ರಜತ್​​ಗೆ ಜಾಮೀನು ಮಂಜೂರು

ಬೆಂಗಳೂರು : ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ‘ಬಿಗ್ ಬಾಸ್’ ರಜತ್‌ಗೆ 24ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನಿ ನಿಯಮಗಳನ್ನು ಉಲ್ಲಂಘಿಸಿದ್ದ ರಜತ್​ನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿ ನೆನ್ನೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು, ನ್ಯಾಯಧೀಶರು ರಜತ್​ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇದೀಗ ರಜತ್​ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ರೀಲ್ಸ್ ಕೇಸ್‌ಗೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ 2 ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗದ ರಜತ್‌ನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿ ನಿನ್ನೆ (ಏ.16) ಕೋರ್ಟ್ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಆದೇಶದ ಅನ್ವಯ ರಜತ್ ಏ.29ರವರೆಗೆ ಪರಪ್ಪನ ಅಗ್ರಹಾರದಲ್ಲಿ ಇರಬೇಕಿತ್ತು.

ಇದನ್ನೂ ಓದಿ :ಅಕ್ರಮ ಸಂಬಂಧಕ್ಕೆ ಗಂಡನ ಕೊಲೆ; ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದಿದ್ದಳು ಕಿಲಾಡಿ ಪತ್ನಿ

ನೆನ್ನೆಯೆ ಜಾಮೀನಿಗೆ ಅರ್ಜಿ ಸಲ್ಲಿಸಿದ ರಜತ್​ ಅರ್ಜಿಯನ್ನು ನಾಳೆಗೆ ಮುಂದೂಡಿದ ನ್ಯಾಯಾಲಯ. ಇಂದು ವಿಚಾರಣೆ ನಡೆಸಿ ರಜತ್​ಗೆ ಜಾಮೀನು ಮಂಜೂರು ಮಾಡಿದೆ.

RELATED ARTICLES

Related Articles

TRENDING ARTICLES