ಬೆಂಗಳೂರು : ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು. ಈ ಪ್ರತಿಭಟನೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಬೆಲೆ ಏರಿಕೆ ಕುರಿತು ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯಲ್ಲಿ ಸಚಿವ ಕೃಷ್ಣಭೈರೇಗೌಡ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು. ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಸಾಮಾನ್ಯ ಜನರ ಸುಲಿಗೆ ಆಗ್ತಿದೆ.
ಕೇಂದ್ರ ಸರ್ಕಾರ ಅದಾನಿ, ಅಂಬಾನಿ ಪರವಾಗಿ ಕೆಲಸ ಮಾಡ್ತಿದ್ದಾರೆ. ಅದಾನಿ, ಅಂಬಾನಿ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತರಾಗ್ತಿದ್ದಾರೆ. ಆದ್ರೆ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಇದನ್ನೂ ಓದಿ :ರೈಲು ಹಳಿ ತಪ್ಪಿಸಲು ಯತ್ನ; ಮರದ ತುಂಡಿನ ಜೊತೆ ಜೈ ಶ್ರೀರಾಮ ಹೆಸರಿಗೆ ಕೇಸರಿ ಬಟ್ಟೆ ಪತ್ತೆ
ಬಡವರ ದುಡಿಮೆಯಿಂದ ಅದಾನಿ, ಅಂಬಾನಿ ಶ್ರೀಮಂತರಾಗ್ತಿದ್ದಾರೆ. ಕೇಂದ್ರ ಸರ್ಕಾರ ಬಂದಾಗಿನಿಂದ ಬೆಲೆ ಏರಿಕೆ ಆಗ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ 400 ರೂ ಇತ್ತು. ಈಗ ಸಾವಿರ ದಾಟಿದೆ. ಸಾಮಾನ್ಯ ಜನರು ಬಳಸುವ ಎಲ್ಲ ವಸ್ತುಗಳ ದರ ಏರಿಕೆ ಆಗಿದೆ. ತಿಗಿಣೆ ರಕ್ತ ಹೀರುವ ರೀತಿ ಕೇಂದ್ರ ಸರ್ಕಾರ ಬಡವರ ರಕ್ತ ಹೀರುತ್ತಿದೆ. ಶ್ರೀಮಂತರ ಟ್ಯಾಕ್ಸ್ ಕಡಿಮೆ ಮಾಡಿ, ಅವರ ಟ್ಯಾಕ್ಸ್‌ನ್ನ ಬಡವರಿಂದಲೇ ವಸೂಲಿ ಮಾಡ್ತಿದ್ದಾರೆ.
ಇದನ್ನೂ ಓದಿ : ಜನಾಕ್ರೋಶ ಯಾತ್ರೆಯಲ್ಲಿ ‘ವಿಜಯೇಂದ್ರನಿಗೆ ಜೈಕಾರ’; ಅಶೋಕ್ ಸೇರಿದಂತೆ ಹಿರಿಯ ನಾಯಕರಿಗೆ ಬೇಸರ
ಅದರಿಂದಲೇ ದೇಶದಲ್ಲಿ ಎಲ್ಲವೂಗಳ ಬೆಲೆ ಹೆಚ್ಚಾಗಿದೆ. ಮೋದಿ ಬಂದ ಮೇಲೆ ಶ್ರೀಮಂತರು ಮತ್ತಟ್ಟು ಶ್ರೀಮಂತರಾಗ್ತಿದ್ದಾರೆ. ಬಡವರು ಮತ್ತಷ್ಟು ಬಡವರಾಗ್ತಿದ್ದಾರೆ. ಇದು ಶ್ರೀಮಂತರ ಸರ್ಕಾರ. ವಿದೇಶ ಬ್ಯಾಂಕ್ಗಳಿಂದ ಬ್ಲಾಕ್ ಮನಿ ತರ್ತೀವಿ ಅಂತ ಹೇಳಿದ್ರು. ಆದರೆ ಒಂದು ಪೈಸೆಯನ್ನು ತಂದಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಚಾರ್ಜ್ ಶೀಟ್ ಹಾಕಿ ವಿರೋಧ ಪಕ್ಷ ಇಲ್ಲದೇ ಇರೋ ರೀತಿ ಮಾಡ್ತಿದ್ದಾರೆ. ಇದರ ವಿರುದ್ದ ಪ್ರತಿ ಜಿಲ್ಲೆ, ತಾಲ್ಲೂಕು, ಹಳ್ಳಿಗಳಲ್ಲೂ ಹೋರಾಟ ಮಾಡಬೇಕು. ಬೆಲೆ ಏರಿಕೆ ಕಡಿಮೆ ಮಾಡೋವರೆಗೂ ನಾವು ಹೋರಾಟ ಮಾಡಬೇಕು ಎಂದಿ ಹೇಳಿದರು.