ರಾಯಚೂರು : ಚೆಲುವಿನ ಚಿತ್ತಾರ ಸಿನಿಮಾ ಶೈಲಿಯ ಟ್ರ್ಯಾಜಿಡಿ ಲವ್ಸ್ಟೋರಿಯೊಂದು ರಾಯಚೂರಿನಲ್ಲಿ ನಡೆದಿದ್ದು. ಪ್ರೀತಿಸಿ, ಮದುವೆಯಾಗಿ ಜೀವನ ಸಾಗಿಸುತ್ತಿದ್ದ ಜೋಡಿಗಳನ್ನ ಹೆತ್ತವರೇ ದೂರ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು. ಗ್ರಾಮದ ರಮೇಶ್ ಮತ್ತು ಯಶೋಧ ಇಬ್ಬರೂ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತಿದ್ದರು. ಇವರಿಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧವಿದ್ದರಿಂದ ರಮೇಶ್,ಯಶೋದಳೊಂದಿಗೆ ಸಿಂಧನೂರು ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿ, ಬೆಂಗಳೂರಿಗೆ ಕರೆತಂದಿದ್ದನು.
ಇದನ್ನೂ ಓದಿ :ಅನಿರ್ದಿಷ್ಟವಾದಿ ಲಾರಿ ಮುಷ್ಕರ ಮೂರೇ ದಿನಕ್ಕೆ ಅಂತ್ಯ
ಮಗಳು ಬೇರೆ ಜಾತಿಯವರನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಯುವತಿಯ ಮನೆಯವರಿಗೆ ಕೋಪವಿತ್ತು. ಮಗಳು ಕಾಣೆಯಾಗಿದ್ದಾಳೆ ಎಂದು ಯಶೋಧಳ ತಂದೆ ಪೊಲೀಸ್ ಠಾಣೆಗೆ ದೂರು ನೀಡಿ. ಮಗಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಬೆಂಗಳೂರಿಗೆ ತೆರಳಿ ರಮೇಶ್ ಮತ್ತು ಯಶೋದಳನ್ನು ಕರೆದುಕೊಂಡು ಬಂದಿದ್ದರು. ನವಜೋಡಿಗಳನ್ನು ಹುಡುಕಿ ರಾಯಚೂರಿಗೆ ಕರೆತಂದಿದ್ದ ಪೊಲೀಸರು. ಯಶೋಧಳನ್ನು ಆಕೆಯ ಕುಟುಂಬಸ್ಥರ ಜೊತೆ ಕಳುಹಿಸಿ ಕೊಟ್ಟಿದ್ದರು.
ಇದರಿಂದ ಬೇಸರಗೊಂಡಿರುವ ರಮೇಶ್ ಮಾಧ್ಯಮದ ಮುಂದೆ ತನ್ನ ಅಳಲು ತೋಡಿಕೊಂಡಿದ್ದು. “ಕಾನೂನು ಪ್ರಕಾರ ಮದುವೆಯಾದ ನಮ್ಮನ್ನು ದೂರ ಮಾಡಿದ್ದಾರೆ. ಹೆದರಿಸಿ ಬೆದರಿಸಿ ನನ್ನ ಹೆಂಡತಿಯನ್ನು ಅವಳ ಪೋಷಕರು ಕರೆದೊಯ್ದಿದ್ದಾರೆ. ಅಲ್ಲದೇ ನನಗೂ ಸಹ ಜೀವ ಬೆದರಿಕೆ ಹಾಕಿದ್ದಾರೆ. ನ್ಯಾಯ ಕೊಡಿಸಬೇಕಾದ ಪೊಲೀಸರ ಕೂಡ ಅನ್ಯಾಯದ ಪರ ನಿಂತಿದ್ದಾರೆ ಎಂದು ರಮೇಶ್ ಆರೋಪಿಸಿದ್ದು.
ಇದನ್ನೂ ಓದಿ :ನಾವು ಪಾಕಿಸ್ತಾನದಲ್ಲಿದ್ದೇವೋ? ಭಾರತದಲ್ಲಿದ್ದೇವೋ? ಎಂಬ ಸಂಶಯ ಮೂಡಿದೆ: ವಿಜಯೇಂದ್ರ
ಯಶೋಧಳ ಪೋಷಕರು ಆಕೆಗೆ ಮತ್ತೊಂದು ಮದುವೆ ಮಾಡಿಸಲು ತಯಾರಿ ನಡೆಸಿದ್ದಾರೆ ಎಂದು ರಮೇಶ್ ಕಣ್ಣೀರಾಕಿದ್ದಾನೆ. ಅಲ್ಲದೆ ಸ್ವತಃ ಯಶೋಧ ನನನಮೆ ಮೇಸೆಜ್ ಮಾಡಿ ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದಾಳೆ. ನನ್ನ ಹೆಂಡತಿಯನ್ನು ನನಗೆ ಕೊಡಿಸಿ ಎಂದು ರಮೇಶ್ ಮನವಿ ಮಾಡಿದ್ದಾನೆ.