ಮೀರತ್ : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮುಗಿಸಲು ಹೆಂಡತಿಯೊಬ್ಬಳು ಖತರ್ನಾಕ್ ಪ್ಲಾನ್ ರೂಪಿಸಿದ್ದು. ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿ, ನಂತರ ಆತನ ಸಾವನ್ನು ಸಹಜ ಸಾವು ಎಂದು ರೂಪಿಸಲು ಹಾವನ್ನು ಬಿಟ್ಟು ಸತ್ತ ಗಂಡನ ದೇಹಕ್ಕೆ ಹಾವಿನಿಂದ ಕಡಿಸಿದ್ದಾರೆ. ಇಂತಹ ಒಂದು ವಿಲಕ್ಷಣ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ನಡೆದಿದ್ದು. ಘಟನೆ ಕುರಿತು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.
ಮಲಗಿದ್ದ ಯುವಕನಿಗೆ ಹಾವು ಕಡಿದು ಯುವಕ ಸಾವನ್ನಪ್ಪಿದ್ದ ಘಟನೆ ಯುಪಿಯ ಮೀರತ್ನ ಅಕ್ಬರ್ಪುರ್ ಸಾದತ್ ಗ್ರಾಮದಲ್ಲಿ ನಡೆದಿತ್ತು. ಅಮಿತ್ ಎಂಬ ಯುವಕನಿಗೆ 10ಕ್ಕೂ ಹೆಚ್ಚು ಬಾರಿ ಕಚ್ಚಿದ್ದ ಹಾವು. ಬೆಳಿಗ್ಗೆಯವರೆಗೂ ಆತನ ಪಕ್ಕದಲ್ಲೇ ಮಲಗಿತ್ತು. ಮೇಲ್ನೋಟಕ್ಕೆ ಯುವಕ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದು ತಿಳಿಯಲಾಗಿತ್ತು. ಕುಟುಂಬಸ್ಥರು ಕೂಡ ಆತನ ದೇಹ ನೀಲಿಕಟ್ಟಿದ್ದರಿಂದ ಆತ ಹಾವು ಕಚ್ಚಿಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದಿದ್ದರು. ಆದರೆ ಹಾವು ಆತನಿಗೆ ಕಚ್ಚಿದ ನಂತರ ಆತನ ಪಕ್ಕದಲ್ಲೆ ಮಲಗಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಕುಟುಂಬಸ್ಥರು ಹಾವಾಡಿಗನನ್ನು ಕರೆಸಿ ಆ ಹಾವನ್ನು ಹಿಡಿಸಿದ್ದರು.
ಇದನ್ನೂ ಓದಿ :‘ಆಸ್ಪತ್ರೆಗೆ ಹಣ ವ್ಯರ್ಥ ಮಾಡಲು ಇಷ್ಟವಿಲ್ಲ’: ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಗಂಡ
ಘಟನೆ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಮಿತ್ನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಇಲ್ಲಿ ಬಂದ ವರದಿ ಎಲ್ಲರಿಗೂ ಶಾಕ್ ಉಂಟುಮಾಡಿದ್ದು. ಅಮಿತ್ ದೇಹದ ಮೇಲೆ ಹಾವು ಕಡಿತದ ಗುರುತಗಳ ಜೊತೆ ಬೇರೆ ಗುರುತುಗಳು ಕಂಡು ಬಂದಿದ್ದೆ. ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿದೆ ಎಂದು ಮರಣೋತ್ತರ ವರದಿಯಲ್ಲಿ ಉಲ್ಲೇಖವಾಗಿದೆ.
ಅಕ್ರಮ ಸಂಬಂಧಕ್ಕೆ ಗಂಡನಿಗೆ ಸ್ಕೆಚ್ ರೂಪಿಸಿದ್ದಳು ಹೆಂಡತಿ
ಮೃತ ಅಮಿತ್, ರವಿತಾ ಎಂಬಾಕೆಯ ಜೊತೆ ಮದುವೆಯಾಗಿದ್ದನು. ಆದರೆ ರವಿತಾಗೆ ಅಮಿತ್ನ ಆಪ್ತ ಸ್ನೇಹಿತನಾಗಿದ್ದ ಅಮರ್ದೀಪ್ ಎಂಬಾತನ ಜೊತೆ ಪ್ರೇಮಾಂಕುರವಾಗಿತ್ತು. ರವಿತಾ ಮತ್ತು ಅಮರದೀಪ್ ನಡುವೆ ವಿವಾಹೇತರ ಸಂಬಂಧವಿತ್ತು ಎಂದು ಸ್ಥಳೀಯ ಎಸ್ಪಿ ರಾಕೇಶ್ ಕುಮಾರ್ ಮಿಶ್ರಾ ಬಹಿರಂಗಪಡಿಸಿದ್ದು. ಅಮಿತ್ ಮತ್ತು ರವಿತಾ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು, ಇದೇ ಕಾರಣಕ್ಕೆ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :50 ಕೋಟಿಯ ನಾಯಿ ಸಾಕಿದ್ದೀನಿ ಎಂದಿದ್ದ ಸತೀಶನ ಮನೆ ಮೇಲೆ ED ದಾಳಿ; ಬಯಲಾಯ್ತು ಸತ್ಯ
ಗಂಡನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ರವಿತಾ ಪ್ರಿಯಕರನ ಜೊತೆಗೂಡಿ ಕತ್ತು ಹಿಸುಕಿ ಅಮಿತ್ನನ್ನು ಕೊಲೆ ಮಾಡಿದ್ದಳು. ನಂತರ ಯಾರಿಗೂ ಅನುಮಾನ ಬರದಂತೆ ಮಾಡಲು 1,000 ರೂ.ಗೆ ಹಾವನ್ನು ಖರೀದಿಸಿ, ಅಮಿತ್ನನ್ನು ಕೊಂದ ನಂತರ ಹಾವನ್ನು ಅವನ ದೇಹದ ಕೆಳಗೆ ಇಟ್ಟಿದ್ದಳು. ಇದೀಗ ಪೋಸ್ಟಮಾರ್ಟಂನಿಂದ ಘಟನೆ ಬೆಳಕಿಗೆ ಬಂದಿದ್ದು. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.