ವಿಜಯಪುರ : ಕಾಂಗ್ರೆಸ್ ವಿರುದ್ದ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ವಿಜಯಪುರಕ್ಕೆ ಕಾಲಿಟ್ಟಿದ್ದು. ಯತ್ನಾಳ್ ಕ್ಷೇತ್ರಕ್ಕೆ ಎಂಟ್ರಿ ಕೊಡಲಿರುವ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರನಿಗೆ ಯತ್ನಾಳ್ ಬೆಂಬಲಿಗರು ‘ಅತಿಥಿ ದೇವೋಭವ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸ್ವಾಗತಿಸಿದ್ದಾರೆ.
ಬೆಲೆ ಏರಿಕೆ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಡಲು ರಾಜ್ಯ ಬಿಜೆಪಿ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದೆ. ಮೊದಲನೇ ಹಂತದ ಯಾತ್ರೆ ಮುಗಿದಿದ್ದು. ಎರಡನೇ ಹಂತದ ಯಾತ್ರೆ ನಿನ್ನೆಯಿಂದ ಬೆಳಗಾವಿಯಲ್ಲಿ ಆರಂಭವಾಗಿದೆ. ಇದರ ಮುಂದುವರಿದು ಭಾಗವಾಗಿ ಇಂದು ಜನಾಕ್ರೋಶ ಯಾತ್ರೆ ವಿಜಯಪುರಕ್ಕೆ ಬರಲಿದ್ದು. ಯತ್ನಾಳ್ ಕ್ಷೇತ್ರಕ್ಕೆ ವಿಜಯೇಂದ್ರ ಎಂಟ್ರಿ ಕೊಡಲಿದ್ದಾರೆ. ಇದಕ್ಕೆ ಯತ್ನಾಳ್ ಬೆಂಬಲಿಗರು ಅಥಿತಿ ದೇವೋಭವ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ವಿಜಯೇಂದ್ರನನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಇದನ್ನೂ ಓದಿ :ಅಪಘಾತ ಮಾಡಿ ಸಾರ್ವಜನಿಕರಿಂದ ಹಲ್ಲೆಗೊಳಗಾಗಿದ್ದ BBMP ಕಸದ ಲಾರಿ ಚಾಲಕ ಆಸ್ಪತ್ರೆಯಲ್ಲಿ ಸಾ*ವು
ಬಿಜೆಪಿ ಮೋರ್ಚಾಗಳ ಮಾಜಿ ಪದಾಧಿಕಾರಿಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿದ್ದು. “ಶಾಸಕ ಯತ್ನಾಳ್ ಅವರ ಅಭಿವೃದ್ಧಿ ನೋಡಲು ಬರುತ್ತಿರುವ ಬಿಜೆಪಿ ನಾಯಕರಿಗೆ ಸ್ವಾಗತ, ಆದರೆ ಯತ್ನಾಳ್ ಅವರ ಹೆಸರು ಕೆಡಿಸಲು ಕೆಲ ಕಿಡಿಗೇಡಿಗಳು ದಾಂದಲೇ, ಗೊಂದಲ ಸೃಷ್ಟಿಸಬಹುದು. ಬಿಜೆಪಿ ಯಾತ್ರೆಗೆ ನಮ್ಮ ಅಡ್ಡಿ ಇಲ್ಲ. ಬಿಜೆಪಿಯಲ್ಲಿ ಕೆಲ ಕಿಡಿಗೇಡಿಗಳು ಗಲಾಟೆ ಮಾಡುವ ಸಾಧ್ಯತೆ ಇದ್ದು ಇದರ ಕುರಿತು ಪೊಲೀಸ್ ಇಲಾಖೆ ನಿಗಾ ಇಡಬೇಕು” ಎಂದು ಯತ್ನಾಳ್ ಬೆಂಬಲಿಗರು ಮನವಿ ಮಾಡಿದ್ದಾರೆ.
ಜೊತೆಗೆ ಜನಾಕ್ರೋಶ ಯಾತ್ರೆ ಸಾಗುವ ಮಾರ್ಗದಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕೂ ಎಂದು ಕೋರಿದ್ದು. ವಿಡಿಯೋ ರೆಕಾರ್ಡಿಂಗ್ ಮಾಡಿಸಲ ಯತ್ನಾಳ್ ಬೆಂಬಲಿಗರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಜೊತೆಗೆ ಈ ಯಾತ್ರೆ ಅಡ್ಡಿ ಮಾಡಲ್ಲ ಎಂದು ಯತ್ನಾಳ್ ಬೆಂಬಲಿಗರು ಆಶ್ವಾಸನೆ ನೀಡಿದ್ದಾರೆ.