Tuesday, September 2, 2025
HomeUncategorizedಅನಿರ್ದಿಷ್ಟವದಿ ಲಾರಿ ಮುಷ್ಕರ ಮೂರೇ ದಿನಕ್ಕೆ ಅಂತ್ಯ

ಅನಿರ್ದಿಷ್ಟವದಿ ಲಾರಿ ಮುಷ್ಕರ ಮೂರೇ ದಿನಕ್ಕೆ ಅಂತ್ಯ

ಬೆಂಗಳೂರು: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಅನಿರ್ಧಿಷ್ಟವದಿ ಲಾರಿ ಮುಷ್ಕರ ಅಂತ್ಯವಾಗಿದ್ದು. ಸರ್ಕಾರ ಮತ್ತು ಲಾರಿ ಮಾಲೀಕರ ನಡುವಿನ ಸಂಧಾನ ಯಶಸ್ವಿಯಾಗಿದೆ. ಇದೀಗ ಲಾರಿ ಮಾಲೀಕರು ತಮ್ಮ ಮುಷ್ಕರವನ್ನು ವಾಪಾಸು ಪಡೆದಿದ್ದಾರೆ.

ಡೀಸೆಲ್​ ಬೆಲೆ ಏರಿಕೆ ಸೇರಿದಂತೆ ಅನೇಕ ಭೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರ ಸಂಘ ಮುಷ್ಕರ ಕೈಗೊಂಡಿತ್ತು. ಇದೀಗ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರ ನೇತೃತ್ವದಲ್ಲಿ ನಡೆದಿರುವ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಅರೆಪ್ರಜ್ಞಾ ಸ್ಥಿತಿಯಲ್ಲಿ ಯುವತಿ ಪತ್ತೆ; ಗ್ಯಾಂಗ್​ರೇಪ್​ ಶಂಕೆ

ಈ ಕುರಿತು ಮಾಧ್ಯಮದೊಂದಿಗೆ ಸಚಿವ ರಾಮಲಿಂಗ ರೆಡ್ಡಿ ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದು. “ಲಾರಿ ಮಾಲೀಕರು ಜೊತೆ ಸಭೆ ನಡೆಸಿದ್ದೇವೆ. ಆರು ಬೇಡಿಕೆಗಳನ್ನು ಇಟ್ಟಿದ್ದಾರೆ. ಮೊದಲು ಆಯುಕ್ತರ ಜೊತೆ ಸಭೆ ನಡೆಸಿದ್ದರು. ಆನ್‌ಲೈನ್‌ನಲ್ಲಿ ದಂಡ ಕಟ್ಟುವ ವ್ಯವಸ್ಥೆಯನ್ನು ಮಾಡಲಿದ್ದೇವೆ’ ಎಂದರು. ಲಾರಿ ಮಾಲೀಕರು ಒಟಿಎಸ್ ಮಾದರಿಯಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸುವಂತೆ ಕೇಳಿದ್ದಾರೆ. ಅದನ್ನು ಸಿಎಂ ಗಮನಕ್ಕೆ ತರಲಿದ್ದೇವೆ ಹಾಗೂ ಟೋಲ್ ವಿಚಾರವನ್ನೂ ಸಿಎಂ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ :ಅವನ್ಯಾವನೋ ಚಂಗ್ಲು ರೇಪ್​ ಮಾಡಿ, ರಾಜ್ಯಪಾಲರಿಗೆ ಅರ್ಜಿ ಕೊಟ್ಟವ್ನೆ; ಡಿ.ಕೆ ಶಿವಕುಮಾರ್​

ಲಾರಿ ಮಾಲೀಕರ ಸಂಘದ ಷಣ್ಮುಗಪ್ಪ ಪ್ರತಿಕ್ರಿಯೆ..!

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಪ್ರತಿಕ್ರಿಯಿಸಿ, ನಾಲ್ಕು ಪ್ರಮುಖ ಬೇಡಿಕೆ ಇತ್ತು. ಬಾರ್ಡರ್ ಚೆಕ್‌ಪೋಸ್ಟ್ ಸಮಸ್ಯೆಯನ್ನು 3 ತಿಂಗಳಲ್ಲಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಡಿಸೇಲ್ ದರ 2023ರಲ್ಲಿ ಯದ್ವಾತದ್ವಾ ಏರಿಕೆ ಮಾಡಿದ್ದರು. ಇದನ್ನು ಇನ್ನೊಂದು ಬಾರಿ ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ.  ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರದಿಂದ ದಿನಕ್ಕೆ 4,500 ಕೋಟಿ ರೂ.ಗಿಂತಲೂ ಅಧಿಕ ನಷ್ಟವಾಗಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments