Saturday, April 19, 2025

ಅವನ್ಯಾವನೋ ಚಂಗ್ಲು ರೇಪ್​ ಮಾಡಿ, ರಾಜ್ಯಪಾಲರಿಗೆ ಅರ್ಜಿ ಕೊಟ್ಟವ್ನೆ; ಡಿ.ಕೆ ಶಿವಕುಮಾರ್​

ಬೆಂಗಳೂರು : ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್​ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ ಅತ್ಯಾಚಾರ ಆರೋಪಿ ಮುನಿರತ್ನ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್​ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆಗೆ ಪ್ರತಿಯಾಗಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​ ‘ಕೇಂದ್ರ ಸರ್ಕಾರ ಎಲ್ಲದರ ಬೆಲೆ ಏರಿಕೆ ಮಾಡುತ್ತಿದೆ. ಯಾವ ಮಹಿಳೆ ಕೂಡ ಚಿನ್ನದ ಮಾಂಗಲ್ಯ ಸರ ತೆಗೆದುಕೊಳ್ಳಲು ಆಗ್ತಾ ಇಲ್ಲ, ಚಿನ್ನದ ಬೆಲೆ ಏರಿಕೆ ಆಗಿದೆ. ಇದರ ಕುರಿತು ಜನಾಕ್ರೋಶ ಆಗಬೇಕಿದೆ ಎಂದು ಹೇಳಿದರು. ಇದನ್ನೂ ಓದಿ :ಪೀಣ್ಯ ಫ್ಲೈಓವರ್ ಮೇಲೆ ಹೊತ್ತಿ ಉರಿದ ಲಾರಿ; ವಾಹನ ಸಂಚಾರಕ್ಕೆ ನಿರ್ಬಂಧ

ಭಾಷಣದ ವೇಳೆ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಡಿಕೆ. ” ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನೇ ಜನರು ಚುನಾವಣೆಯಲ್ಲಿ ಸೋಲಿಸಿದ್ದಾರೆ. ಕುಮಾರಸ್ವಾಮಿ ನನ್ನ ವಿರುದ್ದ ಟನ್​ಗಟ್ಟಲೆ ದಾಖಲೆ ಇದೆ ಎಂದು ಹೇಳಿದ್ದಾರೆ. ನಮ್ಮ ಹುಡುಗರು ಲಾರಿ ಕಳಿಸುತ್ತಾರೆ. ಅದರಲ್ಲಿ ನಿಮ್​ ಟನ್​ಗಟ್ಟಲೆ ದಾಖಲೆಯನ್ನ ತುಂಬಿ ಕಳುಹಿಸಿ. ನೀವು ಹಾಕುವ ಈ ಗೊಡ್ಡು ಬೆದರಿಕೆಗಳಿಗೆ ನಾನು ಹೆದರಲ್ಲ ಎಂದು ಹೇಳಿದರು.

ಇದನ್ನು ಓದಿ :ನಾವು ಪಾಕಿಸ್ತಾನದಲ್ಲಿದ್ದೇವೋ? ಭಾರತದಲ್ಲಿದ್ದೇವೋ? ಎಂಬ ಸಂಶಯ ಮೂಡಿದೆ: ವಿಜಯೇಂದ್ರ

ಮುಂದುವರಿದು ಮಾತನಾಡಿದ ಡಿಕೆಶಿ ಮುನಿರತ್ನನ ಮೇಲೂ ಹರಿಹಾಯ್ದಿದ್ದು. ‘ ಅವನ್ಯಾವನೋ ಚಂಗ್ಲು ನಮ್ಮ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ. ವಿಧಾನಸೌದದಲ್ಲಿ ರೇಪ್​ ಮಾಡಿರುವುದು ಸಾಭೀತಾಗಿದೆ ಎಂದು ಹೆಸರೇಳದೆ ಡಿಕೆಶಿ ಮುನಿರತ್ನನ ವಿರುದ್ದ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES