ಉತ್ತರಪ್ರದೇಶ : ಲಕ್ನೋದಲ್ಲಿ ರೈಲು ಹಳಿ ತಪ್ಪಿಸಲು ಯತ್ನಿಸಿದ್ದು. ಕೂದಲೆಳೆ ಅಂತರದಲ್ಲಿ ಸಂಭವನೀಯ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ರೈಲ್ವೇ ಹಳಿ ಮೇಲೆ ಮರದ ತುಂಡನ್ನು ಇಟ್ಟಿದ್ದು. ಅದರ ಮೇಲೆ ಒಂದು ಬಟ್ಟೆಯಲ್ಲಿ ಜೈ ಶ್ರೀರಾಮ್ ಎಂದು ಬರೆಯಲಾಗಿದೆ. ಘಟನೆ ಸಂಬಂಧ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
05577 ನಂಬರ್ನ ಕಾಶಿ ವಿಶ್ವನಾಥ್ ಎಕ್ಸ್ಪ್ರೆಸ್ನ ರೈಲನ್ನು ಹಳಿ ತಪ್ಪಿಸಲು ಯತ್ನಿಸಿದ್ದು. ದಿಲಾವರ್ ನಗರ ಮತ್ತು ರಹೀಮಾಬಾದ್ ರೈಲು ನಿಲ್ದಾಣಗಳ ನಡುವೆ, ಕೆಲವು ದುಷ್ಕರ್ಮಿಗಳು ರೈಲ್ವೆ ಹಳಿಯ ಮೇಲೆ 6 ಇಂಚು ದಪ್ಪದ ಮರದ ತುಂಡನ್ನು ಇಟ್ಟಿದ್ದಾರೆ. ಅದರ ಮೇಲೆ ಒಂದು ಕೇಸರಿ ಬಟ್ಟೆಯನ್ನು ಇಟ್ಟು, ಅದರ ಮೇಲೆ “ಜೈ ಶ್ರೀ ರಾಮ್” ಎಂದು ಬರೆಯಲಾಗಿದೆ. ಇದನ್ನೂ ಓದಿ :ಕೋಟಿ ಒಡೆಯನಾದ ಮಾದಪ್ಪ; 3.26 ಕೋಟಿ ರೂಪಾಯಿ ಕಾಣಿಕೆ ಸಂಗ್ರಹ
ರೈಲಿನ ಲೋಕೊ ಪೈಲೆಟ್ ಹಳಿ ಮೇಲೆ ಇದ್ದ ಮರದ ತುಂಡನ್ನು ಗಮನಿಸಿ ರೈಲನ್ನು ನಿಲ್ಲಿಸಿದ್ದು. ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಅಷ್ಟೇ ಅಲ್ಲದೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್ ಅನ್ನು ಸಹ ಸಕಾಲದಲ್ಲಿ ನಿಲ್ಲಿಸಲಾಗಿದ್ದು, ಇದರಿಂದಾಗಿ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ. ಘಟನೆ ಸಂಬಂಧ ರೈಲಿನ ಲೋಕೋ ಪೈಲೆಟ್ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದು. ಘಟನೆ ಬಗ್ಗೆ ರೈಲ್ಬೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ :ವಿಜಯಪುರದಲ್ಲಿ ಜನಾಕ್ರೋಶ ಯಾತ್ರೆ; ‘ಅತಿಥಿ ದೇವೋಭವ’ ಎಂದು ಸ್ವಾಗತಿಸಿದ ಯತ್ನಾಳ್ ಬೆಂಬಲಿಗರು
ಘಟನೆ ವರದಿಯಾದ ತಕ್ಷಣ, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರೈಲ್ವೆ ಹಳಿಯ ಬಳಿಯಿಂದ ಬಟ್ಟೆ ಮತ್ತು ಮರದ ತುಂಡುಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ, ರೈಲ್ವೆ ಮತ್ತು ಪೊಲೀಸ್ ತಂಡವು ಈ ಕೃತ್ಯದ ಹಿಂದೆ ಯಾರಿದ್ದಾರೆ ಮತ್ತು ಇದರ ಹಿಂದಿನ ಉದ್ದೇಶವೇನು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.