ಬೆಂಗಳೂರು : ಕಳೆದ ಮಾರ್ಚ್ 29ರಂದು ಥಣಿಸಂದ್ರದ ಹೆಗ್ಗಡೆ ನಗರದ ಬಳಿ ಬಿಬಿಎಂಪಿ ಕಸದ ಲಾರಿಗೆ 10 ವರ್ಷದ ಬಾಲಕನೋರ್ವ ಸಾವನ್ನಪ್ಪಿದ್ದ. ಲಾರಿ ಚಾಲಕನ ನಿರ್ಲಕ್ಷದ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂದು ಅಲ್ಲಿದ್ದ ಜನರು ಲಾರಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದರು. ಮಾರಾಣಾಂತಿಕ ಹಲ್ಲೆಗೊಳಗಾಗಿದ್ದ ಚಾಲಕ ಕೊಂಡಯ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಯೂಟ್ಯೂಬರ್ ಜೊತೆ ಅಕ್ರಮ ಸಂಬಂಧ; ಪ್ರಶ್ನಿಸಿದ ಪತಿಯನ್ನೇ ಕೊಂದ ಪತ್ನಿ
ಥಣಿಸಂದ್ರದ, ಹೆಗಡೆ ನಗರದ ಬಳಿ ಕಳೆದ ಮಾರ್ಚ್ 29ರಂದು ಕಸದ ಲಾರಿಯಿಂದ ಅಪಘಾತವೊಂದು ಸಂಭವಿಸಿತ್ತು. ಬಿಬಿಎಂಪಿ ಕಸದ ಲಾರಿ ಬೈಕ್ ಡಿಕ್ಕಿ ಹೊಡೆದ ಪರಿಣಾಣ 10 ವರ್ಷದ ಬಾಲಕನೋರ್ವ ಸಾವನ್ನಪ್ಪಿದ್ದ. ಆತನ ತಂದೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆಯಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಲಾರಿ ಚಾಲಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದರು.
ಇದನ್ನೂ ಓದಿ :ಜಾತಿಗಣತಿ ಮಾಡಿಲ್ಲ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡಿದ್ದೇವೆ: ಸಿಎಂ ಸಿದ್ದರಾಮಯ್ಯ
ಥಳಿತಕ್ಕೊಳಗಾಗಿದ್ದ ಚಾಲಕ ಕೊಂಡಯ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರಣಾಂತಿಕವಾಗಿ ಗಾಯಗೊಂಡಿದ್ದ ಕೊಂಡಯ್ಯ ಮಂಗಳವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಕೊಂಡಯ್ಯನ ಕುಟುಂಬಸ್ಥರು ಥಳಿಸಿದ್ದ ದುಷ್ಕರ್ಮಿಗಳ ವಿರುದ್ದ ಪ್ರಕರಣ ದಾಖಲಿಸಿದ್ದು. ಚಾಲಕನಿಗೆ ಥಳಿಸಿದ್ದ ನಾಲ್ವರನ್ನು ಸಂಪಿಗೆಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು.