ಬಾಗಲಕೋಟೆ : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿ.ವೈ ವಿಜಯೇಂದ್ರ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು. ಜನಾಕ್ರೋಶ ಯಾತ್ರೆ ವಿಜಯಪುರಕ್ಕೆ ಕಾಲಿಟ್ಟಿದೆ. ಇಲ್ಲಿ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು. ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. ನಾವು ಭಾರತದಲ್ಲಿದ್ದೇವೋ ಅಥವಾ ಪಾಕಿಸ್ತಾನದಲ್ಲಿದ್ದೇವೋ ಎಂಬ ಸಂಶಯ ಮೂಡುತ್ತಿದೆ ಎಂದು ಹೇಳಿದರು.
ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ವಿಜಯೇಂದ್ರ ‘ ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆಯುತ್ತಿಲ್ಲ.
ಆದರೂ ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಜನವಿರೋಧಿ, ರೈತ ವಿರೋಧಿ, ಹಿಂದು ವಿರೋಧಿ ಸರ್ಕಾರ ಇದೆ. ಈ ನಡುವೆ ಮಿತಿಮಿರಿ ಬೆಲೆ ಏರಿಕೆ ಮಾಡಿದೆ. ಅಹಿಂದ ಹೆಸರು ಹೇಳಿ ಚುಕ್ಕಾಣೆ ಹಿಡಿದ ಸಿದ್ದರಾಮಯ್ಯ ಸರ್ಕಾರ, ಎಸ್ಸಿ-ಎಸ್ಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ಜನಾಕ್ರೋಶ ಯಾತ್ರೆ ಮಾಡ್ತದ್ದೇವೆ.
ಇದನ್ನೂ ಓದಿ :‘ಆಸ್ಪತ್ರೆಗೆ ಹಣ ವ್ಯರ್ಥ ಮಾಡಲು ಇಷ್ಟವಿಲ್ಲ’: ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಗಂಡ
ಸಿದ್ದರಾಮಯ್ಯನವರು ನಮ್ಮದು ರೈತರ ಪರ ಸರ್ಕಾರ ಎನ್ನುತ್ತಾರೆ. ಆದರೆ ಹಿಂದೆ ರೈತರು ಟ್ರಾನ್ಸಫಾರ್ಮರ್ ತಗೋಬೇಕು ಅಂದ್ರೆ 25 ಸಾವಿರ ಇತ್ತು. ಈ ಸರ್ಕಾರದಲ್ಲಿ ಒಂದು ಟ್ರಾನ್ಸಫಾರ್ಮರ್ ಬೇಕು ಅಂದರೆ 2-3 ಲಕ್ಷ ಬೇಕಿದೆ. ಮುಸ್ಲಿಂರ ಮದುವೆಗೆ 50 ಸಾವಿರ ಕೊಡ್ತಾರೆ. ಇದನ್ನು ಹಿಂದು ಮಹಿಳೆಯರಿಗೆ ಯಾಕೆ ಕೊಡಲ್ಲ.
ವಿದೇಶ ಶಿಕ್ಷಣಕ್ಕೆ ಮುಸ್ಲಿಂರಿಗೆ ಲಕ್ಷಾಂತರ ಹಣ ಖರ್ಚು ಮಾಡ್ತಿದ್ದಿರಿ. ಹಿಂದುಗಳು ಏನ ಮಾಡಿದ್ದಾರೆ, ಯಾಕೆ ಅಪಮಾನ ಮಾಡ್ತಿದ್ದಿರಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯಗೆ ಪುನರ್ಜನ್ಮ ಕೊಟ್ಟಿದ್ದು ವಿಜಯಪುರದ ಜನ
ಸಿಎಂ ಸಿದ್ದರಾಮಯ್ಯಗೆ 2018ರಲ್ಲಿ ಬಾದಾಮಿ ಜನ ಪುರ್ನಜನ್ಮ ಕೊಟ್ಟರು, ಆದರೆ ಇದುವೆರೆಗೆ ಬಾಗಲಕೋಟೆಗೆ ಸಿಎಂ ಏನು ಕೊಟ್ಟಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗ್ತಿಲ್ಲ. ಈಡೀ ದೇಶದಲ್ಲಿ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದು, ನಿಮ್ಮ ಶಾಸಕ ಬಸವರಾಜ್ ರಾಯರೆಡ್ಡಿ ಹೇಳ್ತಾರೆ. ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೊಡ್ತಿಲ್ಲ ಅಂತ, ನಿಮ್ಮ ಮತ್ತೊಬ್ಬ ಶಾಸಕ ರಾಜುಕಾಗೆ ಹೇಳ್ತಾರೆ ಎಂದು ಹೇಳಿದರು.
ಇದನ್ನೂ ಓದಿ :ಮುಸ್ಲಿಮರು ವಿಜಯ್ಗೆ ಸಪೋರ್ಟ್ ಮಾಡಬೇಡಿ: ದಳಪತಿ ವಿರುದ್ದ ಫತ್ವಾ ಹೊರಡಿಸಿ ಮುಸ್ಲಿಂ ಜಮಾತ್
ಬ್ರಿಟಿಷರ ರೀತಿ ಒಡದು ಆಳುವ ನೀತಿಯನ್ನು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅನುಸರಿಸುತ್ತಿದೆ. ಇಂತಹ ಸರ್ಕಾರವನ್ನ ಕಿತ್ತೊಗೆಯುವ ಕೆಲಸ ಆಗಬೇಕಿದೆ. ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ಆಗ್ತಿದೆ. ಇದರಿಂದ ಸಾಮಾನ್ಯ ಜನ ಸಮಸ್ಯೆ ಅನುಭವಿಸುತ್ತಿವೆ. ಫ್ರಿ ಬಸ್ ಸಂಚಾರ ಮಾಡಿ, ಸಾಮಾನ್ಯ ಜನ ಪರದಾಡುವಂತಾಗಿದೆ. ಸಿದ್ದರಾಮಯ್ಯ ಯಾವುದೇ ಜನಪರ ಕೆಲಸ ಆಗಿಲ್ಲ. ಇಂತಹ ಜನ ವಿರೋಧಿ ಸರ್ಕಾರ, ಜನರ ಮರಣ ಶಾಸನ ಬರೆಯುವ ಕೆಲಸ ಮಾಡ್ತಿದೆ.
ಈ ಜಿಲ್ಲೆಯಲ್ಲಿ ಶಿವಾಜಿ ಮೂರ್ತಿ, ಬಸವೇಶ್ವರ ಮೂರ್ತಿಗಳ ಸ್ಥಾಪನೆಗೆ ಜಿಲ್ಲಾಡಳಿತ ಅವಕಾಶ ಕೊಡ್ತಿಲ್ಲ.
ನಾವು ಪಾಕಿಸ್ತಾನದಲ್ಲಿದ್ದೇವೋ? ಭಾರತದಲ್ಲಿದ್ದೇವೋ? ಅಂತ ಸಂಂಶಯ ಮೂಡುತ್ತಿದೆ. ಈ ಸರ್ಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಇಂತಹ ಸರ್ಕಾರದ ವಿರುದ್ಧ ಹೋರಾಟ ಮಾಡದಿದ್ದರೇ, ವಿರೋಧ ಪಕ್ಷವಾಗಿ ನಾವು ಇದ್ದು ಸತ್ತಂತಾಗುತ್ತೆ ಎಂದು ಬಿವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.