Saturday, April 19, 2025

ಯೂಟ್ಯೂಬರ್ ಜೊತೆ ಅಕ್ರಮ ಸಂಬಂಧ; ಪ್ರಶ್ನಿಸಿದ ಪತಿಯನ್ನೇ ಕೊಂದ ಪತ್ನಿ

ಚಂಡೀಗಢ: ರೀಲ್ಸ್‌ ಪ್ರಿಯಕರನಿಗಾಗಿ ಮಹಿಳೆಯೊಬ್ಬಳು ಗಂಡನಿಗೆ ಚಟ್ಟ ಕಟ್ಟಿರುವ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದ್ದು. ಮೃತ ವ್ಯಕ್ತಿಯನ್ನು ಪ್ರವೀಣ್​ ಎಂದು ಗುರುತಿಸಲಾಗಿದ್ದು. ಪತಿಯನ್ನೇ ಕೊಲೆ ಮಾಡಿದ ಹಂತಕಿ ರವೀನಾಳನ್ನು ಪೊಲೀಸರು ಬಂಧಿಸಿದ್ದಾರೆ.

ಮೀರತ್‌ನಲ್ಲಿ ನಡೆದ ಸೌರಭ್ ಕೊಲೆ ಪ್ರಕರಣವನ್ನೇ ನೆನಪಿಸುವ ಮತ್ತೊಂದು ಭೀಕರ ಹತ್ಯೆ ಹರ್ಯಾಣದಲ್ಲಿ ವರದಿಯಾಗಿದೆ. ಹರ್ಯಾಣದ ಭಿವಾನಿಯಲ್ಲಿ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಪತಿ ಪ್ರವೀಣ್​ನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಆತನ ಪತ್ನಿ ರವೀನಾ ಮತ್ತು ಹರ್ಯಾಣದ ಯೂಟ್ಯೂಬರ್ ಸುರೇಶ್ ಎಂಬುವವರರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರವೀಣ್(35)​ ಮತ್ತು ರವೀನಾ(32) ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಮುಕಲ್​ ಎಂಬ ಮುದ್ದಾದ ಮಗನೂ ಇದ್ದನು. ಪ್ರಸುತ ಈ ಮಗು ತನ್ನ ಅಜ್ಜ ಸುಭಾಷ್ ಮತ್ತು ಚಿಕ್ಕಪ್ಪ ಸಂದೀಪ್ ಜೊತೆ ವಾಸಿಸುತ್ತಿದ್ದಾನೆ. ಆದರೆ ಇನ್ಸ್ಟಗ್ರಾಂ ಗೀಳು ಹಚ್ಚಿಕೊಂಡಿದ್ದ ರವೀನಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡು ಹೆಸರುವಾಸಿಯಾಗಿದ್ದಳು.

ಇದನ್ನೂ ಓದಿ :ಬಿಗ್​ಬಾಸ್​ ಸ್ಪರ್ಧಿ ರಜತ್​ಗೆ ಮತ್ತೆ 14 ದಿನ ಜೈಲುವಾಸ

ಇನ್‌ಸ್ಟಾಗ್ರಾಮ್‌ನಲ್ಲಿ 34,000 ಕ್ಕೂ ಹೆಚ್ಚು ಫಾಲೋವರ್ಸ್ ರನ್ನು ಕೂಡ ಹೊಂದಿದ್ದಳು. ಈಗಿರುವಾಗ ಪ್ರೇಮ್​ನಗರದ ನಿವಾಸಿ ಸುರೇಶ್​ ಎಂಬಾತ ರವೀನಾಗೆ ಪರಿಚಯವಾಗಿದ್ದನು. ಕ್ರಮೇಣ ಇಬ್ಬರೂ ಸೇರಿ ರೀಲ್ಸ್​ ಮಾಡಲು ಶುರು ಮಾಡಿದ್ದರು. ಇತ್ತ ಸುರೇಶ್​ ಕೂಡ ಯೂಟ್ಯೂಬ್​ನಲ್ಲಿ ಸಕ್ರಿಯನಾಗಿದ್ದನು. ಇಬ್ಬರು ಕಳೆದ ಒಂದುವರೆ ವರ್ಷದಿಂದ ಸಂಪರ್ಕದಲ್ಲಿದ್ದರು. ಇಬ್ಬರು ಸೇರಿ ಸಣ್ಣಪುಟ್ಟ ವೀಡಿಯೊಗಳನ್ನು ಮಾಡುತ್ತಿದ್ದರು.

ಪರಸ್ಪರ ರೀಲ್ಸ್ ಮಾಡುತ್ತಿದ್ದ ರವೀನಾ ಮತ್ತು ಸುರೇಶ್ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಪೊಲೀಸ್ ಮೂಲಗಳ ಪ್ರಕಾರ ಮಾರ್ಚ್ 25 ರಂದು ಪತಿ ಪ್ರವೀಣ್ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಪತ್ನಿ ರವೀನಾ ಹರ್ಯಾಣದ ಯೂಟ್ಯೂಬರ್ ಸುರೇಶ್ ಮನೆಗೆ ಕರೆಸಿಕೊಂಡಿದ್ದಳು. ಇಬ್ಬರೂ ಮನೆಯಲ್ಲಿದ್ದಾಗ ಅಚಾನಕ್ಕಾಗಿ ಮನೆಗೆ ಬಂದ ಪ್ರವೀಣ್ ಇಬ್ಬರನ್ನೂ ಅಶ್ಲೀಲ ಸ್ಥಿತಿಯಲ್ಲಿ ನೋಡಿದ್ದಾನೆ. ಈ ವೇಳೆ ಸುರೇಶ್ ಮೇಲೆ ಹಲ್ಲೆ ಮಾಡಿದ ಪ್ರವೀಣ್ ಪತ್ನಿ ರವೀನಾಗೂ ಥಳಿಸಿದ್ದಾನೆ. ಇದೇ ಹೊತ್ತಿನಲ್ಲಿ ರವೀನಾ ಮತ್ತು ಸುರೇಶ್ ಇಬ್ಬರೂ ಸೇರಿ ವಿಷಯ ಹೊರಗೆ ತಿಳಿದರೆ ನಮಗೆ ತೊಂದರೆ ಎಂದು ಭಾವಿಸಿ ದುಪ್ಪಟಾದಿಂದ ಪ್ರವೀಣ್ ನ ಕುತ್ತಿಗೆ ಹಿಸುಕಿ ಕೊಂದು ಹಾಕಿದ್ದಾರೆ.

ಇದನ್ನೂ ಓದಿ :ED ದಾಳಿ ಮಾಡಲು ಮೋದಿ ಸಂಚು ರೂಪಿಸಿದ್ದಾರೆ, ರಾಜ್ಯ ಸರ್ಕಾರ ಎಚ್ಚರಿಕೆಯಿಂದ ಇರಬೇಕು: ಖರ್ಗೆ

ನಂತರ ಪತಿಯ ಶವವನ್ನು ರವೀನಾ ಮತ್ತು ಸುರೇಶ್​ ಇಬ್ಬರು ಸೇರಿ ಬೈಕ್​ ಮೇಲೆ ವಿಲೇವಾರಿ ಮಾಡಿದ್ದು. ಚರಂಡಿಯಲ್ಲಿ ಎಸೆದು ಬಂದಿದ್ದಾರೆ. ಇನ್ನು ಪ್ರವೀಣ್ ಕೊಲೆ ಹೊರತಾಗಿಯೂ ದಿನವಿಡೀ ಸಾಮಾನ್ಯವಾಗಿ ವರ್ತಿಸುತ್ತಿದ್ದಳು. ಕುಟುಂಬ ಸದಸ್ಯರು ಪ್ರವೀಣ್ ಎಲ್ಲಿದ್ದಾನೆಂದು ಕೇಳಿದಾಗ, ಆಕೆ ಗೊತ್ತಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಳು.

ಆದರೆ ಮೂರು ದಿನಗಳ ನಂತರ ಮಾರ್ಚ್ 28ರಂದು, ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರವೀಣ್‌ನ ಕೊಳೆತ ಶವ ಪತ್ತೆಯಾಗಿತ್ತು. ಈ ಶವ ಯಾರದ್ದು ಎಂದು ಪೊಲೀಸರು ತನಿಖೆ ನಡೆಸಿದಾಗ ಅದು ಪ್ರವೀಣ್ ನದ್ದು ಎಂದು ತಿಳಿದುಬಂತು. ಬಳಿಕ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಹೆಲ್ಮೆಟ್ ಧರಿಸಿದ ಸವಾರ ಮತ್ತು ಮುಸುಕು ಧರಿಸಿದ ಮಹಿಳೆ ಶವದಂತೆ ಕಾಣುವ ವಸ್ತುವನ್ನು ಬೈಕ್ ಮೇಲೆ ಸಾಗಿಸುತ್ತಿರುವುದು ಕಂಡುಬಂದಿತ್ತು. ಇದು ಪೊಲೀಸರು ರವೀನಾ ಮತ್ತು ಸುರೇಶ್ ಅವರ ಮೇಲೆ ಅನುಮಾನಗೊಳ್ಳಲು ಕಾರಣವಾಗಿತ್ತು. ಬಳಿಕ ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ಅವರು ತಪ್ಪೊಪ್ಪಿಕೊಂಡರು. ಪೊಲೀಸ್ ಕಸ್ಟಡಿ ನಂತರ ಇಬ್ಬರೂ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.

RELATED ARTICLES

Related Articles

TRENDING ARTICLES