ಕಲಬುರಗಿ : ಜಾತಿಗಣತಿಗೆ ವಿರೋಧ ವಿಚಾರವಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ‘ನಾಳೆ ಇದರ ಕುರಿತು ಚರ್ಚೆ ನಡೆಸಲು ಮೀಟಿಂಗ್ ಕರೆದಿದ್ದೇವೆ. ಅದು ಜಾತಿಗಣತಿ ಅಲ್ಲ, ಸೋಷಿಯೋ, ಎಕನಾಮಿಕ್ ಸರ್ವೆ ಎಂದು ಹೇಳಿದರು.
ಕಲಬುರಗಿ ಏರ್ಪೋರ್ಟ್ನಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ‘ನಾಳೆ ಮೀಟಿಂಗ್ ಕರೆದಿದ್ದೇವೆ, ಇದರ ಕುರಿತು ಚರ್ಚೆ ಮಾಡ್ತೇವೆ. ಅದೂ ಜಾತಿಗಣತಿ ಅಲ್ಲ, ಸೋಷಿಯೋ, ಎಕನಾಮಿಕ್ ಸರ್ವೇ. ಇದರಿಂದ ಯಾರಿಗೂ ಅನ್ಯಾಯವಾಗಲ್ಲ. ಅನ್ಯಾಯ ಆಗೋದಕ್ಕೆ ನಾವು ಬಿಡಲ್ಲ’ ಎಂದು ಹೇಳಿದರು. ಚನ್ನಗಿರಿ ಶಾಸಕ ಶಿವಗಂಗಾ ಲಿಂಗಾಉತ ಶಾಸಕರೂ ಸಾಮೂಹಿಕ ರಾಜೀನಾಮೆ ನೀಡಬೇಕೂ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ‘ಶಿವಗಂಗಾ ಬಸವರಾಜು ಕ್ಯಾಬಿನೆಟ್ ಮಿನಿಸ್ಟರ್ ಅಲ್ಲ. ನಾಳೆ ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ಮಾಡ್ತೇವೆ. ಜನರು ಗೊಂದಲಕ್ಕೆ ಒಳಗಾಗಬಾರದು ಎಂದು ಹೇಳಿದರು.
ಇದನ್ನೂ ಓದಿ :ಒಕ್ಕಲಿಗರಿಗೆ ಅನ್ಯಾಯವಾಗುತ್ತೆ ಎಂದು ಡಿಕೆಶಿ ಸಭೆ ಕರೆದ್ರು, ಆದರೆ ಲಿಂಗಾಯತ ನಾಯಕರು ಧ್ವನಿ ಎತ್ತಿಲ್ಲ: ಶಿವಗಂಗಾ ಬಸವರಾಜ್
ರಾಹುಲ್, ಸೋನಿಯಾ ವಿರುದ್ದದ ಚಾರ್ಜಶೀಟ್ಗೆ ಸಿಎಂ ಪ್ರತಿಕ್ರಿಯೆ..!
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ದ ಇಡಿ ಚಾರ್ಜಶೀಟ್ ಸಲ್ಲಿಸಿದ್ದು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ “ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಮಾಡ್ತಿದ್ದಾರೆ.
ನೂರಾರು ವರ್ಷಗಳಿಂದ ನ್ಯಾಷನಲ್ ಹೆರಾಲ್ಡ್ ಇದೆ. ಇದೀಗ ನೂರಾರು ಕೋಟಿ ಆಸ್ತಿಗಳನ್ನ ಮುಟ್ಟುಗೋಲು ಹಾಕೋದು, ಸೋನಿಯಾಗಾಂಧಿ, ರಾಹುಲ್ ಗಾಂಧಿ ಮೇಲೆ ಕೇಸ್ ಗಳನ್ನ ಹಾಕೋದು ಇವೆಲ್ಲಾ ದ್ವೇಷದ ರಾಜಕಾರಣ ಎಂದು ಹೇಳಿದರು.