ಬೆಳಗಾವಿ : ಪೈಪ್ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಕನಕದಾಸ ಸರ್ಕಲ್ ಬಳಿ ದುರ್ಘಟನೆ ನಡೆದಿದ್ದು. 24 /7 ಕುಡಿಯುವ ನೀರಿನ ಯೋಜನೆಗಾಗಿ L&T ಕಂಪನಿ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿತ್ತು. ಈ ವೇಳೆ ಏಕಾಏಕಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಹುದುಗಿ ಹೋಗಿದ್ದು. ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ :ಜನಾಕ್ರೋಶ ಯಾತ್ರೆಯಲ್ಲಿ ‘ವಿಜಯೇಂದ್ರನಿಗೆ ಜೈಕಾರ’; ಅಶೋಕ್ ಸೇರಿದಂತೆ ಹಿರಿಯ ನಾಯಕರಿಗೆ ಬೇಸರ
ಕಾರ್ಮಿಕರ ರಕ್ಷಣೆಗಾಗಿ ತಕ್ಷಣವೇ ರಕ್ಷಣಾ ಕಾರ್ಯಚರಣೆ ನಡೆಸಿದರು ಕಾರ್ಯಚರಣೆ ಸಫಲವಾಗದೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತದೇಹಗಳನ್ನು ಶವಗಾರಕ್ಕೆ ರವಾನಿಸಿದ್ದಾರೆ. ಮೃತರ ಗುರುತು ಇನ್ನಷ್ಟೆ ಪತ್ತೆಯಾಗಬೇಕಿದೆ.