ಹುಬ್ಬಳ್ಳಿ : 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆರೋಪಿ ರಿತೇಶ್ ಕುಮಾರ್ ಶವ ಇನ್ನು ಅನಾಥವಾಗಿದ್ದು. ಆರೋಪಿಯ ಸಂಬಂಧಿಕರು ಅಥವಾ ಕುಟುಂಬಸ್ಥರ ಪತ್ತೆಗೆ ಹುಬ್ಬಳ್ಳಿ ಪೊಲೀಸರು ಭಾವಚಿತ್ರ ಸಹಿತ ಪೊಲೀಸ್ ಪ್ರಕಟಣೆ ಹೊರಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿ ರಿತೇಶ್ ಕುಮಾರ್ನನ್ನು ಹುಬ್ಬಳ್ಳಿ ಪೊಲೀಸರು ಎನ್ಕೌಂಟರ್ ಮಾಡುವ ಮೂಲಕ ಪರಲೋಕಕ್ಕೆ ಕಳುಹಿಸಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು ಹಾರಿಸಿದ್ದ ಗುಂಡಿಗೆ ಆರೋಪಿ ಬಲಿಯಾಗಿದ್ದನು. ಆರೋಪಿಯ ಶವವನ್ನು ಪೊಲೀಸರು ಕಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು. ಈತನ ಕುಟುಂಬಸ್ಥರ ಪತ್ತೆಗೆ ಇದೀಗ ಪೊಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ :ವೈಡಕ್ಟ್ ಉರುಳಿ ಆಟೋ ಚಾಲಕ ಸಾವು; ಪವಾಡ ಸದೃಶ್ಯವಾಗಿ ಬದುಕಿಳಿದ ಪ್ರಯಾಣಿಕ
ಹುಬ್ಬಳ್ಳಿಯ ಅಶೋಕನಗರ ಪೊಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು. ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದಾನೆ. ಕೋಲು ಮುಖ ಹೊಂದಿರುವ ಆರೋಪಿ. 5.3 ಅಡಿ ಎತ್ತರ ಹಗಲ ಹಣೆ ಹೊಂದಿದ್ದಾನೆ. ಅಲ್ಲದೆ ಆರೋಪಿಯ ಕೈಮೇಲೆ ಹಿಂದಿ ಅಕ್ಷದಲ್ಲಿ ಓಂ ನಮಃ ಶಿವಾಯ ಜಯ ಸಂಜಯ ಎಂಬ ಟ್ಯಾಟೂ ಗುರುರು ಇದೆ. ಒಂದು ವೇಳೆ ಆರೋಪಿಯ ಗುರುತು ಪತ್ತೆ ಹಚ್ಚಿದವರು ಕೂಡಲೇ 0836-2233490 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ಹೊರಡಿಸಲಾಗಿದೆ.