ಬೆಂಗಳೂರು : ಬೀದಿ ಕಾಮುಕನೊಬ್ಬನ ಅಟ್ಟಹಾಸಕ್ಕೆ ಬೆಂಗಳೂರಿನ ಮಹಿಳೆಯರು ನಲುಗಿದ್ದು. ವಿಕೃತ ಕಾಮಿಯೊಬ್ಬ ಪ್ಯಾಂಟ್ ಬಿಚ್ಚಿ ತನ್ನ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ. ಪ್ರಶ್ನೆ ಮಾಡಿದ ಏರಿಯದ ಜನರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ.
ಬೆಂಗಳೂರಿನ, ಕ್ವೀನ್ಸ್ ರಸ್ತೆಯ, ರಾಜೀವ್ ಗಾಂಧಿ ಕಾಲೋನಿಯಲ್ಲಿ ಕೃತ್ಯ ನಡೆದಿದ್ದು. ಏಪ್ರೀಲ್ 13ರಂದು ರಾತ್ರಿ 10:30ಕ್ಕೆ ಕಾರ್ತಿಕ ಎಂಬ ಕಾಮುಕನಿಂದ ಘಟನೆ ನಡೆದಿದ್ದು. ಏಪ್ರೀಲ್ 13ರ ರಾತ್ರಿ ಶ್ವೇತ ಎಂಬ ಮಹಿಳೆ ಊಟ ಮುಗಿಸಿ ಮನೆ ಎರಡನೇ ಮಹಡಿಯ ರೂಂನಲ್ಲಿ ಮಲಗಲು ಎಂದು ಹೋಗಿತ್ತಿದ್ದರು. ಈ ವೇಳೆ ಎದರು ಮನೆಯಲ್ಲಿ ವಾಸವಾಗಿದ್ದ ಕಾಮುಕ ಕಾರ್ತಿಕ್ ಎಂಟ್ರಿಯಾಗಿದ್ದು. ಪ್ಯಾಂಟ್ ಬಿಚ್ಚಿ ಮಹಿಳೆಗೆ ತನ್ನ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ.
ಇದನ್ನೂ ಓದಿ : ಪೋಷಕರಿಗೆ ಗುಡ್ ನ್ಯೂಸ್ : ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲಗೊಳಿಸಿದ ಶಿಕ್ಷಣ ಇಲಾಖೆ
ಈ ವೇಳೆ ಇದನ್ನು ಪ್ರಶ್ನಿಸಿದ ಶ್ವೇತ ಪತಿ ಮೇಲೂ ಆರೋಪಿ ಹಲ್ಲೆ ನಡೆಸಿದ್ದು. ಜಗಳ ಬಿಡಿಸಲು ಬಂದ ತನ್ನ ತಾಯಿ ಮತ್ತು ಉಳಿದವರ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ. ಕೆಳ ಮಹಡಿಯಲ್ಲಿದ್ದವರ ಮೇಲೆ 2ನೇ ಮಹಡಿಯಿಂದ ಇಟ್ಟಿಗೆ, ಹೂವಿನ್ ಪಾಟ್ಗಳನ್ನು ಎಸೆದಿದ್ದು. ಸುಮಾರು 7 ಜನರಿಗೆ ಗಾಯವಾಗಿದ್ದು. ಅದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಜಗಳದ ವೇಳೆ ಬುದ್ದಿ ಹೇಳಲು ಹೋಗಿದ್ದ ರವೀಂದ್ರ ಎಂಬಾತನಿಗೆ ಗಂಭೀರ ಗಾಯವಾಗಿದ್ದು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು. ನಾಪತ್ತೆಯಾಗಿರುವ ಕಾಮುಕ ಕಾರ್ತಿಕ್ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಕಾಮುಕ ಕಾರ್ತಿಕ್ ಈ ಹಿಂದೆಯೂ ಹಲವು ಬಾರಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದನು ಎಂದು ತಿಳಿದು ಬಂದಿದೆ.