ಕಲಬುರಗಿ : ಜಿಲ್ಲೆಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದು. ಮೋದಿ ಇಡಿ, ಐಟಿ ಸಂಸ್ಥೆಗಳನ್ನು ಬಳಸಿ ಸಂಚು ಮಾಡುತ್ತಿದ್ದಾರೆ. ಅದಕ್ಕೆ ನೀವೆಲ್ಲಾ ಏನೇ ಭೇದ ಭಾವವಿದ್ದರು ಒಗ್ಗಾಟ್ಟಾಗಿ ಇರಬೇಕು ಎಂದು ಸಿಎಂ ಮತ್ತು ಡಿಸಿಎಂಗೆ ಒಗ್ಗಟ್ಟಿನ ಪಾಠ ಮಾಡಿದರು.
ಸಂಪೂರ್ಣ ಭಾಷಣದಲ್ಲಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಖರ್ಗೆ. ‘ಮೋದಿಯಂತು ಒಳ್ಳೆ ಕೆಲಸ ಮಾಡಲ್ಲ, ಕೊನೆ ಪಕ್ಷ ಒಳ್ಳೆ ಕೆಲಸ ಮಾಡೋರನ್ನಾದರೂ ಮಾಡೋಕೆ ಬಿಡಿ. ಕಾಂಗ್ರೆಸ್ ಅಂಬೆಡ್ಕರ್ಗೆ ಅವಮಾನ ಮಾಡಿದೆ ಎಂದು ಮೋದಿ ಹೇಳುತ್ತಾರೆ. ಆದರೆ ಮೋದಿ ಅಂಬೆಡ್ಕರ್ ಹೆಸರನ್ನು ಕಾಟಚಾರಕ್ಕೆ ತೆಗೆದುಕೊಳ್ಳುತ್ತಾರೆ. ನೀವೆಲ್ಲಾ ಸಂವಿಧಾನವನ್ನ ನಿರ್ನಾಮ ಮಾಡಲು ಹೊರಟ್ಟಿದ್ಧೀರ. ಈ ದೇಶಕ್ಕಾಗಿ ರಾಜೀವಗಾಂಧಿ, ಇಂದಿರಾಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ವಿಕೃತ ಕಾಮಿ: ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸುತ್ತಾನೆ ಕಾಮುಕ
ಕರ್ನಾಟಕ ಸರ್ಕಾರ ಎಚ್ಚರಿಕೆಯಿಂದ ಇರಬೇಕು..!
ಆದರೆ ಮೋದಿಯವರೆ ನೀವೇನು ಮಾಡಿದ್ರಿ? ಬರೀ ಇಡಿ/ಐಟಿ ಸಂಸ್ಥೆಗಳಿಂದ ವಿರೋಧ ಪಕ್ಷದವರನ್ನು ಹೆದರಿಸುತ್ತಿದ್ದಾರೆ. ಇಂತಹ ಇಡಿ/ಐಟಿ ಸಂಸ್ಥೆಗಳಿಂದ ಕರ್ನಾಟಕ ಸರ್ಕಾರ ಎಚ್ಚರಿಕೆಯಿಂದ ಇರಬೇಕು
ಯಾವ ಕ್ಷಣದಲ್ಲಿಯೂ ನಿಮ್ಮನ್ನ ಇಡಿ/ಐಟಿ ದಾಳಿ ಮಾಡಬಹುದು. ನರೇಂದ್ರ ಮೋದಿ, ಅಮಿತ್ ಶಾ ಅದಕ್ಕಾಗಿ ಸಂಚು ಮಾಡ್ತಿದಾರೆ. ಅದಕ್ಕಾಗಿ ನೀವೆಲ್ಲಾ ಏನೇ ಬೇದಭಾವ ಇದ್ರು ಒಗ್ಗಟ್ಟಾಗಿ ಇರಬೇಕು ಎಂದು ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ತಾಕೀತು ಮಾಡಿದರು.
ಇದನ್ನೂ ಓದಿ :ಪೋಷಕರಿಗೆ ಗುಡ್ ನ್ಯೂಸ್ : ಒಂದನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲಗೊಳಿಸಿದ ಶಿಕ್ಷಣ ಇಲಾಖೆ
ನ್ಯಾಷನಲ್ ಹೆರಾಲ್ಡ್ ಹಗರಣದ ಬಗ್ಗೆ ಖರ್ಗೆ ಮಾತು
ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ರಾಹುಲ್ ಮತ್ತು ಸೋನಿಯಾ ವಿರುದ್ದ ಚಾರ್ಜಶೀಟ್ ಸಲ್ಲಿಕೆಯಾಗಿರುವುದರ ಬಗ್ಗೆ ಮಾತನಾಡಿದ ಖರ್ಗೆ ‘ ದೇಶಕ್ಕಾಗಿ ಕಟ್ಟಿದ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಮೇಲೆ ಇಡಿ ಮೂಲಕ ಚಾರ್ಜ್‌ಶಿಟ್ ಸಲ್ಲಿಕೆಯಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಚಾರ್ಜ್‌ಶಿಟ್ ಹಾಕಿದ್ದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.