Wednesday, April 16, 2025

ಕಿಚ್ಚ ಸುದೀಪ್‌ ಅಭಿನಯದ ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೂಟಿಂಗ್‌ ಶುರು: ಫಸ್ಟ್‌ ಲುಕ್‌ ರಿವೀಲ್‌

ಕಿಚ್ಚ ಸುದೀಪ್​ ಅಭಿನಯಿಸುತ್ತಿರುವ ಬಿಗ್​ ಬಜೆಟ್​ನ ಬಹುನಿರೀಕ್ಷಿತ ಚಿತ್ರವಾದ ‘ಬಿಲ್ಲಾ ರಂಗ ಬಾಷಾ’ ಸಿನಿಮಾ ಚಿತ್ರೀಕರಣ ಇಂದಿನಿಂದ ಆರಂಭವಾಗಿದ್ದು. ಚಿತ್ರದ ಫಸ್ಟ್​ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಏಪ್ರೀಲ್ 16ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡುವುದಾಗಿ ಕಿಚ್ಚ ಸುದೀಪ್​ ಮೊದಲೇ ಹಿಂಟ್​ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಇಂದು ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

ಡಿಸೆಂಬರ್​ನಲ್ಲಿ ಬಿಡುಗಡೆಯಾಗಿದ್ದ ‘ಮ್ಯಾಕ್ಸ್’ ಸಿನಿಮಾ ಸುದೀಪ್​ಗೆ ದೊಡ್ಡ ಸಕ್ಸಸ್​ ತಂದುಕೊಟ್ಟಿತ್ತು. ಇದರ ಬೆನ್ನಲ್ಲೆ ಮತ್ತೊಂದು ಬಹುನಿರೀಕ್ಷಿತ ದೊಡ್ಡ ಬಜೆಟ್​ನ ‘ಬಿಲ್ಲಾ ರಂಗ ಬಾಷಾ’ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಆಗಿದೆ. ಸಿನಿಮಾ ಕುರಿತು ಕಿಚ್ಚ ಸುದೀಪ್​ ತಮ್ಮ ಎಕ್ಷ್​ ಖಾತೆಯಲ್ಲಿ ಪೋಸ್ಟರ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಅನಾಥವಾಗಿ ಬಿದ್ದಿದೆ ಅತ್ಯಾಚಾರಿಯ ಶವ; ಭಾವಚಿತ್ರ ಸಹಿತ ಪ್ರಕಟಣೆ ಹೊರಡಿಸಿದ ಪೊಲೀಸರು

ಸಿನಿಮಾ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಸುದೀಪ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘2209 AD BRB first blood’ ಎಂದು ಸಿನಿಮಾಗೆ ಟೈಟಲ್‌ ಇಡಲಾಗಿದೆ. ಪೋಸ್ಟರ್‌ನಲ್ಲಿ ಸುದೀಪ್ ಜಬರ್ದಸ್ತ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಎರಡು ಚಾಪ್ಟರ್‌ಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಮೊದಲ ಚಾಪ್ಟರ್‌ಗೆ ‘ಫಸ್ಟ್ ಬ್ಲಡ್’ ಎಂದು ಚಿತ್ರತಂಡ ಕರೆದಿದೆ. ಅನೂಪ್ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.

RELATED ARTICLES

Related Articles

TRENDING ARTICLES