ದಾವಣಗೆರೆ : ರಾಜ್ಯದಲ್ಲಿ ಜಾತಿ ಜನಗಣತಿ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಆಡಳಿತ ಪಕ್ಷದ ನಾಯಕರೆ ರಾಜ್ಯ ಸರ್ಕಾರದ ವಿರುದ್ದ ಮಾತನಾಡಲು ಶುರು ಮಾಡಿದ್ದಾರೆ. ಈ ಕುರಿತು ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ ನೀಡಿದ್ದು. ಡಿಕೆ ಶಿವಕುಮಾರ್ ತಮ್ಮ ಸಮಾಜಕ್ಕೆ ಅನ್ಯಾಯವಾಗುತ್ತದೆ ಎಂದ ತಕ್ಷಣ ಸಭೆ ಕರೆದರು, ಆದರೆ ಲಿಂಗಾಯತ ನಾಯಕರು ಈ ಕುರಿತು ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ದಾವಣಗೆರೆಯಲ್ಲಿ ಮಾತನಾಡಿದ ಬಸವರಾಜ್ ಶಿವಗಂಗಾ ‘ಡಿಕೆಶಿಯವರನ್ನು ಏಕೆ ನಾವು ಇಷ್ಟು ಇಷ್ಟ ಪಡುತ್ತೇವೆ ಎಂದರೆ ಅವರು ಅವರ ಸಮಾಜಕ್ಕೆ ಅನ್ಯಾಯವಾಗುತ್ತದೆ ಎನ್ನುವ ತಕ್ಷಣ ಸಭೆ ಕರೆದರು. ಆದರೆ ನಮ್ಮ ಲಿಂಗಾಯತ ಸಮಾಜದ ಏಳು ಜನ ಸಚಿವರಿದ್ದರೂ ಈ ವಿಷಯದ ಕುರಿತು ಧ್ವನಿ ಎತ್ತಿಲ್ಲ. ಶಾಸಕರು ಇದರ ಬಗ್ಗೆ ಚರ್ಚೆ ಮಾಡಲು ಪೋನ್ ಮಾಡಿದರೂ ಸಚಿವರು ರಿಸೀವ್ ಮಾಡೋಲ್ಲ.
ಇದನ್ನೂ ಓದಿ :ಬಿಗ್ಬಾಸ್ ಸ್ಫರ್ಧಿ ರಜತ್ ಅರೆಸ್ಟ್; ಮತ್ತೇನು ಮಾಡಿದ್ರು ಗೊತ್ತಾ..!
ರಾಜ್ಯದಲ್ಲಿರುವ ಏಳು ಜನ ಲಿಂಗಾಯತ ಸಚಿವರು ಅಸಮರ್ಥರಿದ್ದಾರೆ, ಅವರು ಕೂಡಲೇ ರಾಜೀನಾಮೇ ನೀಡಬೇಕು. ಮೊನ್ನೆ ಈಶ್ವರ್ ಖಂಡ್ರೆಯವರಿಗೆ ಕಾಲ್ ಮಾಡಿದರೂ ರಿಸೀವ್ ಮಾಡಿಲ್ಲ. ಆದರೆ ಒಕ್ಕಲಿಗ ಸಮಾಜಕ್ಕೆ ಅನ್ಯಾಯ ಆಗಿದೆ ಎಂದ ಕೂಡಲೇ ಡಿಕೆಶಿ ಸಭೆ ಮಾಡಿದ್ದಾರೆ. ಆ ಸಮಾಜದ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ ಲಿಂಗಾಯತ ಸಮುದಾಯದ ಸಚಿವರು ಮಾತ್ರ ಚರ್ಚೆ ಮಾಡ್ತಾ ಇಲ್ಲ ಎಂದು ಶಾಸಕ ಶಿವಗಂಗಾ ಬಸವರಾಜ್ ಆಕ್ರೋಶ ಹೊರಹಾಕಿದರು.
ನಮ್ಮ ಸಮಾಜದ ಶಾಸಕರು ಸ್ವಾರ್ಥಕ್ಕಾಗಿ ಮಾತ್ರ ರಾಜಕೀಯ ಮಾಡ್ತಾರೆ
ಲಿಂಗಾಯತ ಸಚಿವರ ಮೇಲೆ ಕಿಡಿಕಾಡಿದ ಬಸವರಾಜ್ ಶಿವಗಂಗಾ ‘ನಮ್ಮ ಸಮಾಜದ ಸಚಿವರು ಅವರ ಸ್ವಾರ್ಥಕ್ಕಾಗಿ ಮಾತ್ರ ರಾಜಕೀಯ ಮಾಡ್ತಾ ಇದಾರೆ. ಜಾತಿಗಣತಿ ನಮ್ಮ ಸಚಿವರಿಗೆ ಅವಶ್ಯಕತೆ ಇಲ್ಲ. ಯಾವ ಯಾವ ಸಮುದಾಯಕ್ಕೆ ಅನ್ಯಾಯ ಆಗಿದೆ ಅವರೆಲ್ಲ ಸಭೆ ಮಾಡ್ತಿವಿ.
ಇದನ್ನೂ ಓದಿ :ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ
ಮತ್ತೆ ಜಾತಿಗಣತಿ ಸಮೀಕ್ಷೆಯನ್ನ ಪ್ರಾರಂಭ ಮಾಡಬೇಕೂ. ನಮ್ಮ ಕ್ಷೇತ್ರದಲ್ಲಿ ನಾನೂ ಸಮೀಕ್ಷೆ ನಡೆಸುತ್ತಿದ್ದೇನೆ. ಇನ್ನೆರಡು ಮೂರು ದಿನಗಳಲ್ಲಿ ವರದಿ ನೀಡುತ್ತೇನೆ. ನಾಳೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಿ. ಆದರೆ ಈ ವರದಿಯನ್ನು ಬಿಡುಗಡೆ ಮಾಡುವುದು ಬೇಡಾ. ಎಲ್ಲಾ ಕ್ಷೇತ್ರಗಳ ಸಮೀಕ್ಷೆ ಮುಗಿದ ನಂತರ ಬಿಡುಗಡೆ ಮಾಡಲಿ ಎಂದು ಹೇಳಿದರು.