ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಯತ್ನಾಳ್ ಉಚ್ಚಾಟನೆಯ ನಂತರವೂ ಅಸಮಾಧಾನ ಹೊಗೆಯಾಡುತ್ತಿದ್ದು. ವಿಜಯೇಂದ್ರ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಗೆ ಬಿಜೆಪಿ ಹಿರಿಯ ನಾಯಕರಿಂದ ನಿರೀಕ್ಷಿತ ಬೆಂಬಲ ದೊರೆಯುತ್ತಿಲ್ಲ. ಹೋದಲ್ಲಿ ಬಂದಲ್ಲಿ “ವಿಜಯೇಂದ್ರ ಮುಂದಿನ ಸಿಎಂ” ಎಂಬ ಘೋಷಣೆ ಕೂಗುತ್ತಿದ್ದು. ಇದು ಬಿಜೆಪಿಯ ಹಿರಿಯ ನಾಯಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ ಎಂದು ತಿಳಿದು ಬಂದಿದೆ.
ಬೆಲೆ ಏರಿಕೆ ಸೇರಿದಂತೆ ರಾಜ್ಯ ಸರ್ಕಾರದ ಆಡಳಿತದ ವಿರುದ್ದ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು. ಮೊದಲ ಹಂತದ ಪ್ರತಿಭಟನೆ ಮುಗಿದು. ಎರಡನೇ ಹಂತದ ಪ್ರತಿಭಟನೆ ಬೆಳಗಾವಿಯಲ್ಲಿ ಆರಂಭವಾಗಿದೆ. ಆದರೆ ಈ ಯಾತ್ರೆಗೆ ಬಿಜೆಪಿಯ ಹಿರಿಯರಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಬೆಂಗಳೂರಿನ ಟ್ರಾಫಿಕ್ಗೆ ಹೈರಣಾಗಿ ಕಾರ್ ಬಿಟ್ಟು, ಆಟೋ ಹತ್ತಿದ ಸಂತೋಷ್ ಲಾಡ್
ಬಿಜೆಪಿ ಹಿರಿಯ ನಾಯಕರ ಬೇಸರಕ್ಕೆ ಕಾರಣವೇನೂ..!
ಜನಾಕ್ರೋಶ ಯಾತ್ರೆ ಸಾಗುತ್ತಿರುವ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು “ಮುಂದಿನ ಸಿಎಂ ವಿಜಯೇಂದ್ರ” ಎಂಬ ಘೋಷಣೆ ಕೂಗುತ್ತಿದ್ದು. ಹೋದಲ್ಲಿ ಬಂದಲ್ಲಿ ಈ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದು ಆರ್ ಅಶೋಕ್ ಸೇರಿದಂತೆ ಬಹುತೇಕ ಬಿಜೆಪಿ ಹಿರಿಯ ನಾಯಕರಿಗೆ ಬೇಸರ ತರಿಸಿದೆ. ಮಡಿಕೇರಿಯಲ್ಲಿ ನಡೆದ ಜನಾಕ್ರೋಶ ಸಭೆಯಲ್ಲಿ ಇದೇ ರೀತಿ ಘೋಷಣೆ ಕೂಗಿದ್ದು. ಇದರಿಂದ ಬೇಸತ್ತ ಬಿಜೆಪಿ ಹಿರಿಯರು ಜನಾಕ್ರೋಶ ಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಈ ಕುರಿತು ಬಿಜೆಪಿ ಹಿರಿಯ ನಾಯಕರು ಅಸಮಧಾನ ಹೊಂದಿದ್ದು.ಹೈಕಮಾಂಡ್ ನಾಯಕರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ವಿಜಯೇಂದ್ರ ಎಂದು ಹೇಳಲಿ. ಬಳಿಕ ನಾವು ಕೆಲಸ ಮಾಡುತ್ತೇವೆ. ಎಲ್ಲೆ ಹೋದರೂ ವಿಜಯೇಂದ್ರ ಕಾರ್ಯಕರ್ತರ ಮುಖಾಂತರ ಮುಂದಿನ ಸಿಎಂ ಘೋಷಣೆ ಹಾಕಿಸಿಕೊಳ್ಳುತ್ತಾರೆ. ಈ ಜನಾಕ್ರೋಶ ಹೋರಾಟ ಪಕ್ಷದ ವೃದ್ದಿಗೋ ಅಥವಾ ವ್ಯಕ್ತಿ ಪ್ರಮೋಶನ್ಗೊ ಎಂಬ ಬೇಸರ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ :ಜಾತಿಗಣತಿ ಮಾಡಿಲ್ಲ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡಿದ್ದೇವೆ: ಸಿಎಂ ಸಿದ್ದರಾಮಯ್ಯ
ಇನ್ನು ಕೆಲವು ನಾಯಕರು ಪಕ್ಷದ ಕಾರ್ಯಕ್ರಮವಾದ್ದರಿಂದ ಅನಿವಾರ್ಯವಾಗಿ ಜನಾಕ್ರೋಶ ಯಾತ್ರೆಯಲ್ಲಿ ಭಾಗಿಯಾಗಿದ್ದು. ಪಕ್ಷದ ಕಾರ್ಯಕ್ರಮಕ್ಕೆ ಗೈರಾಗಬಾರದಲ್ಲ ಎಂಬ ಕಾರಣಕ್ಕೆ ಅಟೆಂಡೆಲ್ಸ್ ಹಾಕಿ ಬರುತ್ತಿದ್ದಾರೆ. ಮೊದಲ ಹಂತದ ಹೋರಾಟದಲ್ಲಿ ವಿ ಸೋಮಣ್ಣ, ಶೋಭ ಕರಂದ್ಲಾಜೆ, ಬೊಮ್ಮಾಯಿ ಗೈರಾಗಿದ್ದಾರೆ. ಸುನೀಲ್ ಕುಮಾರ್ ಕೇವಲ ಉಡುಪಿಯಲ್ಲಿ ಮಾತ್ರ ಭಾಗಿಯಾಗಿದ್ದು. ಉಳಿದೆಡೆ ಅವರು ಬಂದಿಲ್ಲ.
ಈ ಎಲ್ಲಾ ಅಂಶಗಳು ರಾಜ್ಯ ಬಿಜೆಪಿಯಲ್ಲಿ ಆತಂರಿಕ ಕಲಹ ಮುಂದುವರಿದಿರುವುದನ್ನು ಸೂಚಿಸುತ್ತಿದ್ದು. ಯತ್ನಾಳ್ ಉಚ್ಚಾಟನೆಯ ನಂತರವೂ ಬಿಜೆಪಿಯಲ್ಲಿ ತಟಸ್ಥರೆಂದು ಗುರುತಿಸಿಕೊಂಡಿದ್ದ ನಾಯಕರು ವಿಜಯೇಂದ್ರ ವಿರುದ್ದ ಪರೋಕ್ಷವಾಗಿ ಕಿಡಿಕಾರುತ್ತಿದ್ದಾರೆ. ಕೇವಲ ಮಾಧ್ಯಮದ ಮುಂದೆ ಕೈ ಕೈ ಎತ್ತಿ ತೋರಿಸುವ ಬಿಜೆಪಿಯಲ್ಲಿ ಆತಂರಿಕ ಕಲಹ ಮುಂದುವರಿದಿರುವುದಕ್ಕೆ ಈ ಎಲ್ಲಾ ಘಟನೆಗಳು ಸಾಕ್ಷಿಯಂತಿವೆ.