Saturday, April 19, 2025

ಬಿಗ್​ಬಾಸ್​ ಸ್ಪರ್ಧಿ ರಜತ್​ಗೆ ಮತ್ತೆ 14 ದಿನ ಜೈಲುವಾಸ

ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ‘ಬಿಗ್​ಬಾಸ್’ ಮಾಜಿ ಸ್ಪರ್ಧಿ ರಜನ್‌ನನ್ನು ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಪೊಲೀಸರು 2ಬಾರಿ ನೋಟಿಸ್ ನೀಡಿದ್ದರು. ಆದರೆ ರಜತ್​ ಪೊಲೀಸ್​ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದರು. ಇದಕ್ಕೆ ಅಸಮಧಾನಗೊಂಡಿದ್ದ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್​ ವಿಧಿಸಿತ್ತು. ಕೋರ್ಟ್​ ಸೂಚನೆ ಮೇರೆಗೆ ರಜತ್​ನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ :ಚೀನಾ ಮೇಲೆ ಶೇ. 245ರಷ್ಟು ಟಾರಿಫ್ ವಿಧಿಸಿದ ಟ್ರಂಪ್​; ಎರಡು ದೇಶದ ಆರ್ಥಿಕತೆಗೆ ಏಟು

ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ರಜತ್​ನನ್ನು 14 ದಿನಗಳ ನ್ಯಾಯಾಂಗಕ್ಕೆ ನೀಡಲಾಗಿದೆ. ಏಪ್ರೀಲ್​ 29ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು. ರಜತ್​ ಪರ ವಕೀಲರು ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಜಾಮೀನು ಆದೇಶವನ್ನು ನಾಳೆಗೆ ಕಾಯ್ದಿರಿಸಲಾಗಿದೆ.

RELATED ARTICLES

Related Articles

TRENDING ARTICLES