ಬೆಂಗಳೂರು : ಬಿಗ್‌ಬಾಸ್ ಮಾಜಿ ಸ್ಫರ್ಧಿ ರಜತ್ನನ್ನು ಬಸವೇಶ್ವರ ನಗರ ಪೊಲೀಸರು ಮತ್ತೊಮ್ಮೆ ಬಂಧಿಸಿದ್ದು. ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ರಜತ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಬಿಗ್‌ಬಾಸ್ ಸ್ಫರ್ಧಿ ರಜತ್ ಮತ್ತು ವಿನಯ್ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಆರೋಪದ ಮೇಲೆ ಬಸವೇಶ್ವರ್ ನಗರ ಪೊಲೀಸರು ಬಂಧಿಸಿದ್ದರು. ಮೂರು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ರಜತ್ ಮತ್ತು ವಿನಯ್ ಷರತ್ತುಬದ್ದ ಜಾಮೀನು ಪಡೆದು ಜೈಲಿನಿಂದ ಆಚೆ ಬಂದಿದ್ದರು. ಇದೀಗ ಮತ್ತೊಮ್ಮೆ ರಜತ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ
ಷರತ್ತುಬದ್ದ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ರಜತ್, ಇಂದು ಬಸವೇಶ್ವರ್ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಷರತ್ತುಬದ್ದ ಜಾಮೀನು ನೀಡಿದ್ದ ನ್ಯಾಯಾಲಯ ಆರೋಪಿಗಳು ಪ್ರತಿ ವಿಚಾರಣೆಗೂ ಹಾಜರಾಗೂವಂತೆ ಸೂಚನೆ ನೀಡಿತ್ತು. ಆದರೆ ರಜತ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದರು. ಇದಕ್ಕೆ ನ್ಯಾಯಾಲಯ ಆರೋಪಿಯನ್ನು ಬಂಧಿಸುವಂತೆ ವಾರೆಂಟ್ ಹೊರಡಿಸಿತ್ತು. ಈ ಹಿನ್ನಲೆ ಪೊಲೀಸ್ ಠಾಣೆಗೆ ವಿಚಾರಣೆಗೆ ಬಂದಿದ್ದ ರಜತ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದ್ದು. ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.