ಚಿತ್ರದುರ್ಗ : ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು. ಮೃತ ಮಹಿಳೆಯನ್ನು 28 ವರ್ಷದ ಆಶಾ ಎಂದು ಗುರುತಿಸಲಾಗಿದೆ. ಮಹಿಳೆ ಖಾಸಗಿ ಶಾಲಾ ಬಸ್ನಲ್ಲಿ ಕಂಡೆಕ್ಟರ್ ಆಗಿ ಜೀವನ ಸಾಗಿಸುತ್ತಿದ್ದಳು. ಇದೇ ಬಸ್ ಚಾಲಕನಾಗಿದ್ದ ಮಂಜುನಾಥ್ ಎಂಬಾತ ಈ ಕೃತ್ಯವೆಸಗಿದ್ದಾನೆ.
ರಾಮಘಟ್ಟ ಗ್ರಾಮದ ಆಶಾಗೆ ಕಳೆದ 4 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ದುರದೃಷ್ಠವಶಾತ್ ಮದುವೆಯಾದ ಕೇವಲ 2 ವರ್ಷದಲ್ಲಿ ಆಶಾ ಗಂಡನನ್ನು ಕಳೆದುಕೊಂಡಿದ್ದಳು. ನಂತರ ತವರು ಮನೆ ಸೇರಿದ್ದ ಆಶಾ ಒಬ್ಬೊಂಟಿಯಾಗಿ ರಾಮಘಟ್ಟದ ತವರು ಮನೆಯಲ್ಲೆ ಉಳಿದುಕೊಂಡಳು. ಮನೆಯವರಿಗೆ ಹೊರೆಯಾಗಬಾರದು ಎಂದು ಹೊಳಲ್ಕೆರೆಯ ಸ್ನೇಹ ಪಬ್ಲಿಕ್ ಶಾಲೆಯ ಬಸ್ಲ್ಲಿ ಆಶಾ ಸಹಾಯಕಿಯಾಗಿ ಸೇರಿಕೊಂಡಿದ್ದಳು.
ಇದನ್ನೂ ಓದಿ :ಒಕ್ಕಲಿಗರಿಗೆ ಅನ್ಯಾಯವಾಗುತ್ತೆ ಎಂದು ಡಿಕೆಶಿ ಸಭೆ ಕರೆದ್ರು, ಆದರೆ ಲಿಂಗಾಯತ ನಾಯಕರು ಧ್ವನಿ ಎತ್ತಿಲ್ಲ: ಶಿವಗಂಗಾ ಬಸವರಾಜ್
ಅದೇ ಶಾಲಾ ಬಸ್ನಲ್ಲಿ ಡ್ರೈವರ್ ಆಗಿದ್ದ ಮಂಜುನಾಥ್ (34) ಆಶಾ ಸ್ನೇಹ ಬೆಳೆಸಿದ್ದಳು. ಸ್ನೇಹ ಸಲುಹೆಯಾಗಿ ಬೆಳೆದು ಇಬ್ಬರ ನಡುವೆ ಅಕ್ರಮ ಸಂಬಂಧವೂ ಏರ್ಪಟ್ಟಿತ್ತು. ಇದೇ ವಿಶ್ವಾಸದಲ್ಲಿ ಇಬ್ಬರು ಹಣದ ಲೇವಾದೇವಿಯನ್ನು ಮಾಡಿದ್ದರು. ಮಂಜುನಾಥ್ ಆಗ್ಗಾಗ್ಗೆ ಆಶಾ ಬಳಿ ಹಣವನ್ನು ತೆಗೆದುಕೊಳ್ಳುವುದು, ವಾಪಾಸ್ ನೀಡುವುದು ಮಾಡುತ್ತಿದ್ದನು. ಆದರೆ ಈ ಬಾರಿ ಹಣ ಪಡೆದಿದ್ದ ಮಂಜುನಾಥ್ ಆಶಾಗೆ ಹಣವನ್ನು ವಾಪಾಸ್ ನೀಡಿರಲಿಲ್ಲ.
ಹಣ ನೀಡುವಂತೆ ಆಶಾ ಒತ್ತಡ ಏರಿದ್ದಕ್ಕೆ ಮಂಜುನಾಥ್ ಹಣ ವಾಪಾಸ್ ಕೊಡುವುದಾಗಿ ಆಶಾಳನ್ನು ರಾಮಘಟ್ಟ, ಕೆಂಗುಂಟೆ ನಡುವೆ ಇರುವ ಜಮೀನಿಗೆ ಕರೆಸಿ ಅತ್ಯಾಚಾರ ಎಸೆಗಿ, ತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಹೊಳಲ್ಕೆರೆ ಪೋಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :ಉರ್ದು ಒಂದು ಧರ್ಮಕ್ಕೆ ಸಂಬಂಧಿಸಿದ ಭಾಷೆಯಲ್ಲ, ಅದು ಭಾರತದ ಭಾಷೆ; ಸುಪ್ರೀಂಕೋರ್ಟ್
ಮೊದಲಿಗೆ ಆಶಾಳ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಒಂದೇ ನಂಬರ್ಗೆ ಹೆಚ್ಚು ಭಾರಿ ಕರೆ ಮಾಡಿರುವುದು ತಿಳಿದು ಬಂದಿದೆ. ಆ ನಂಬರ್ ಪರಿಶೀಲಿಸಿದಾಗ ಮಂಜುನಾಥ್ ಎಂಬುದು ಪೊಲೀಸರಿಗೆ ತಿಳಿದು ಬಂದಿದೆ. ಕೂಡಲೇ ಮಂಜುನಾತ್ನನ್ನು ವಶಕ್ಕೆ ಪಡೆದ ಪೊಲೀಸರು ಸರಿಯಾಗಿ ಡ್ರಿಲ್ ಮಾಡಿದಾಗ ಮಂಜುನಾಥ್ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.