ಚೆನ್ನೈ: ಲಕ್ನೋ ವಿರುದ್ದದ ಪಂದ್ಯದಲ್ಲಿ ಚೆನ್ನೈ ತಂಡ ಗೆದ್ದು ಬೀಗಿದ್ದು. ಈ ಪಂದ್ಯದಲ್ಲಿ 26ರನ್ಗಳಿಸಿದ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರು. ಈ ಪ್ರಶಸ್ತಿ ಪಡೆದ ಧೋನಿಯೇ ನನಗೆ ಯಾಕೆ ಈ ಪ್ರಶಸ್ತಿ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಚೆನೈ ತಂಡ ರೋಚಕ ಜಯ ಪಡೆದಿದೆ. ಮೊದಲು ಬ್ಯಾಟ್ ಬೀಸಿದ ಲಖ್ನೋ ನಾಯಕ ರಿಷಬ್ ಪಂತ್ನ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 166 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಚೆನೈ ತಂಡ ಆರಂಭಿಕವಾಗಿ ಮೇಲುಗೈ ಪಡೆದರು. ನಂತರ ಕುಸಿತ ಕಾಣಲಾರಂಭಿಸಿತು.
ಇದನ್ನೂ ಓದಿ :ಬ್ರೇಕ್ಫೇಲ್ ಆಗಿ ಡಿವೈಡರ್ಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್
111 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನೈ ತಂಡ ನಂತರ ಬಂದ ಶಿವಂ ದುಬೆ ಮತ್ತು ನಾಯಕ ಎಂ.ಎಸ್ ಧೋನಿ 57ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಪಂದ್ಯದಲ್ಲಿ ಎಂಎಸ್ ಧೋನಿ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ ಅಜೇಯ 26 ರನ್ ಗಳಿಸಿದರು. ಎಲ್‌ಎಸ್‌ಜಿ ನೀಡಿದ 166 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಜಯ ಸಾಧಿಸಿತು. ಧೋನಿ ಅವರಿಗೆ ಪರಿಣಾಮಕಾರಿ ಇನ್ನಿಂಗ್ಸ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.