ಬೆಂಗಳೂರು : ಹುಬ್ಬಳ್ಳಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯ ಶವದ ಅಂತ್ಯಸಂಸ್ಕಾರದ ಕುರಿತು ರಾಜ್ಯ ಹೈಕೋರ್ಟ್ ಸೂಚನೆ ನೀಡಿದ್ದು. ಆರೋಪಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿ. ಆತನ ಶವವನ್ನು ಹೂಳುವಂತೆ ಸೂಚನೆ ನೀಡಿದೆ.
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿ, ಕೊಲೆ ಮಾಡಿದ್ದ ಆರೋಪಿ ರಿತೇಶ್ ಕುಮಾರ್ ಪೊಲೀಸರ್ ಎನ್ಕೌಂಟರ್ಗೆ ಬಲಿಯಾಗಿದ್ದು. ಆತನ ಶವವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈತ ಬಿಹಾರ್ ಮೂಲದವನೆಂದು ತಿಳಿದು ಬಂದಿದ್ದರು. ಈತನ ಸಂಬಂಧಿಗಳ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಲಭಿಸಿಲ್ಲ.ಈ ಕುರಿತು ಹೈಕೋಟ್ ಸೂಚನೆ ನೀಡಿದ್ದು. ಆರೋಪಿ ರಿತೇಶ್ ಕುಮಾರ್ನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ. ಅವರ ವಿಡಿಯೋ ಚಿತ್ರಕರಿಸಬೇಕೂ. ರಿತೇಶ್ ಮೃತದೇಹದ ಮಾದರಿಯನ್ನು ಸಂಗ್ರಹಿಸಿದಬೇಕೂ ಎಂದು ಆದೇಶಿಸಿದೆ.
ಇದನ್ನೂ ಓದಿ :ರೆಸಾರ್ಟ್ಗೆ ಬಂದು ದಾಂಧಲೆ; ಕ್ಷುಲಕ ವಿಷಯಕ್ಕೆ ಬ್ಯಾಟ್ ಹಿಡಿದು ಫೈಟ್ ಮಾಡಿದ ಕುಟುಂಬ
ಪ್ರಕರಣ ತನಿಖೆಗೆ ಸಿಐಡಿ ಎಂಟ್ರಿ..!
ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಸಿಐಡಿ ಎಂಟ್ರಿ ಕೊಟ್ಟಿದ್ದು. ಸಿಐಡಿ ತಂಡ ಹುಬ್ಬಳ್ಳಿಗೆ ಆಗಮಿಸಿದೆ. ಎಸ್ಪೊ ವೆಂಕಟೇಶ್ ಸೇರಿದಂತೆ ಮೂರು ಅಧಿಕಾರಿಗಳ ನೇತೃತ್ವದ ತಂಡ ಹುಬ್ಬಳ್ಳಿ ಶವಗಾರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.