Wednesday, April 16, 2025

ರೆಸಾರ್ಟ್​ಗೆ ಬಂದು ದಾಂಧಲೆ; ಕ್ಷುಲಕ ವಿಷಯಕ್ಕೆ ಬ್ಯಾಟ್​​ ಹಿಡಿದು ಫೈಟ್​ ಮಾಡಿದ ಕುಟುಂಬ

ಹಾಸನ : ಬೇಸಿಗೆ ರಜೆ ಹಿನ್ನಲೆ ಎರಡು ದಿನ ಎಂಜಾಯ್ ಮಾಡೋಕೆ ಅಂತಾ ಕುಟುಂಬ ಸಮೇತ ರೆಸಾರ್ಟ್​ಗೆ ಬಂದಿದ್ದ ಅತಿಥಿಗಳ ಕುಟುಂಬವೊಂದು ರೆಸಾರ್ಟ್ ಮಾಲೀಕರು ಮತ್ತು ಸಿಬ್ಬಂದಿ ಜೊತೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ಮಾಡಿಕೊಂಡಿದೆ. ಹೊಡೆದಾಟದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಕುಟುಂಬದ ನಡೆಗೆ ಭಾರೀ ಖಂಡನೆ ವ್ಯಕ್ತವಾಗಿದೆ. ಇದನ್ನೂ ಓದಿ :ಅಧಿಕೃತವಾಗಿಯೇ ಅನೌನ್ಸ್ ಆಯ್ತು ಕೆಜಿಎಫ್ 3 ಸಿನಿಮಾ; ಹೊಂಬಾಳೆ ಸಂಸ್ಥೆ ಕೊಟ್ಟ ಸುಳಿವೇನು..?

ಮಂಗಳೂರಿನ ಕುಟುಂಬವೊಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿಳಿಸಾರೆ ಗ್ರಾಮದಲ್ಲಿರೋ ಸ್ಟೋನ್ ವ್ಯಾಲಿ ರೆಸಾರ್ಟ್‌ಗೆ ಬಂದಿದೆ. ದಿನವೆಲ್ಲಾ ರೆಸಾರ್ಟ್​ನಲ್ಲೇ ಕಾಲ ಕಳೆದ ಕುಟುಂಬ ರಾತ್ರಿ 8ಗಂಟೆ ಆದ್ರೂ ಸ್ವಿಮಿಂಗ್ ಪೂಲ್ ನಲ್ಲೇ ಕಾಲ ಕಳೆದಿದೆ. ಇದನ್ನು ಗಮನಿಸಿದ ರೆಸಾರ್ಟ್ ಮ್ಯಾನೇಜರ್ ಇಲ್ಲಿನ ನಿಯಮದಂತೆ 7ಗಂಟೆ ನಂತರ ಸ್ವಿಮಿಂಗ್ ಪೂಲ್ ನಲ್ಲಿ ಇರುವಂತಿಲ್ಲ ಎಂದು ಸೂಚಿಸಿದ್ದು ಈ ಮಾತು ಕೇಳದ ಅತಿಥಿಗಳು ಮ್ಯಾನೇಜರ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.

ನಂತರ ಇದು ಮುಂದುವರೆದು ಊಟದ ವಿಚಾರಕ್ಕೂ ಗಲಾಟೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆಯೂ ಇದೇ ಮುನಿಸು ಮುಂದುವರೆದು ರೆಸಾರ್ಟ್ ಸಿಬ್ಬಂದಿ ಮತ್ತು ಅತಿಥಿ ಕುಟುಂಬದ ನಡುವೆ ವಾಗ್ವಾದ ನಡೆದಿದ್ದು ಕೈಕೈ ಮಿಲಾಯಿಸಿ ಅದು ದೊಡ್ಡ ಗಲಾಟೆಗೆ ತಿರುಗಿಕೊಂಡು ಮಾರಾಮಾರಿ ನಡೆದಿದೆ. ಕೈಯಲ್ಲಿ ವಿಕೆಟ್‌, ಬ್ಯಾಟ್ ಹಿಡಿದು ಹೊಡೆದಾಡಿಕೊಳ್ಳುವ ಭಯಾನಕ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ :ಬ್ರೇಕ್​ಫೇಲ್​ ಆಗಿ ಡಿವೈಡರ್​ಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್​

ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದಲ್ಲಿ ಇಬ್ಬರ ಕಡೆಯವರಿಗೂ ಗಾಯಗಳಾಗಿದ್ದು ಗಾಯಗೊಂಡ ರೆಸಾರ್ಟ್​ಗೆ ಬಂದಿದ್ದ ಕುಟುಂಬ ಸಕಲೇಶಪುರಕ್ಕೆ ಬಂದು ಕ್ರಾಫಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದೆ. ಇವರು ಚಿಕಿತ್ಸೆ ಪಡೆದು ಮಂಗಳೂರಿಗೆ ತೆರಳಿದ್ದಾರೆ. ಮೊದಲು ನಮ್ಮದೇನು ತಪ್ಪೇ ಇಲ್ಲಾ ರೆಸಾರ್ಟ್ ‌ಮಾಲೀಕರೇ ಕ್ಷುಲ್ಲಕ ಕಾರಣಕ್ಕೆ‌ ಹಲ್ಲೆ‌ ಮಾಡಿದ್ರು ಎಂದು ಅತಿಥಿಗಳು ಆರೋಪಿಸಿದ್ದರು. ಆದರೆ ಇವರ ಆರೋಪದ ನಂತರ ರೆಸಾರ್ಟ್ ಮಾಲೀಕರು ಘಟನೆಯ‌ ಸಂಪೂರ್ಣ ಚಿತ್ರಣದ ವೀಡಿಯೋ ಬಿಡುಗಡೆ ಮಾಡಿದ್ದು ಅತಿಥಿ ಗುಂಪು ರೆಸಾರ್ಟ್ ‌ಸಿಬ್ಬಂದಿ‌ ಮೇಲೆ ಎರಗಿರುವುದು. ಕೈಯಲ್ಲಿ ದೊಣ್ಣೆ, ಬ್ಯಾಟ್, ವಿಕೆಟ್ ಹಿಡಿದು ರೌಡಿಗಳಂತೆ ಓಡಾಡುವ ದೃಶ್ಯ ಬಹಿರಂಗಗೊಂಡಿವೆ.

RELATED ARTICLES

Related Articles

TRENDING ARTICLES