ಹುಬ್ಬಳ್ಳಿ : 5 ವರ್ಷದ ಪುಟ್ಟ ಮಗುವನ್ನು ಕೊಲೆ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಎನ್ಕೌಂಟರ್ ಮಾಡಿದ್ದು. ಕೊಲೆಘಾತುಕನನ್ನು ಮುಗಿಸಿದ ಪಿಎಸ್‌ಐ ಅನ್ನಪೂರ್ಣ ಇದೀಗ ದೇಶದ ಜನರ ಮನಗೆದ್ದಿದ್ದಾರೆ.
ಯಾರಿದು ಪಿಎಸ್‌ಐ ಅನ್ನಪೂರ್ಣ..!
ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗುಜನಟ್ಟಿ ಗ್ರಾಮದ ಅನ್ನಪೂರ್ಣ ಅವರು, 2018ರ ಬ್ಯಾಚ್ನ ಪಿಎಸ್‌ಐ ಆಫೀಸರ್. ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಅನ್ನಪೂರ್ಣ ಅವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು, ತಾಯಿಯ ನೆರಳಲ್ಲಿ ಬದುಕಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿದ್ದ ಅನ್ನಪೂರ್ಣ, ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದರು.
ಇದನ್ನೂ ಓದಿ :ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ; ತಂದೆಯ ಬಗ್ಗೆ ಮಗ ಹೇಳಿದ್ದೇನು
MSc ಪದವಿ ಪಡೆದರು ಅನ್ಯ ನೌಕರಿಗಳತ್ತ ಮುಖಮಾಡದೇ ಪೊಲೀಸ್ ಇಲಾಖೆ ಆಯ್ಕೆ ಮಾಡಿದ್ದ ಅನ್ನಪೂರ್ಣ ಅವರು. ಐದು ವರ್ಷದ ಬಾಲಕಿಯನ್ನ ಕೊಂದು ಪರಾರಿಯಾಗಿದ್ದ ಹಂತಕನನ್ನು ಎನ್ಕೌಂಟರ್ ಮಾಡುವ ಮೂಲಕ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೆ ದೇಶದ ಜನರ ಮನಗೆದಿದ್ದಾರೆ. ದಿಟ್ಟಗತ್ತಿ ಪಿಎಸ್‌ಐ ಅನ್ನಪೂರ್ಣ ಮಾಡಿದ ಸಾಹಸಕ್ಕೆ ಅಭಿಮಾನಗಳ ಮಹಾಪೂರವೇ ಹರಿದು ಬರುತ್ತಿದೆ.