ಬೆಂಗಳೂರು : ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಯುವಕನನ್ನು 10 ದಿನಗಳ ನಂತರ ಪೊಲೀಸರು ಬಂಧಿಸಿದ್ದು. ಬಂಧಿನ ಆರೋಪಿಯನ್ನು ಸಂತೋಶ್ ಡೇನಿಯಲ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯನ್ನು ಸಂತೋಷ್ ಡೇನಿಯಲ್ ಬೆಂಗಳೂರಿನ ಶೋರೂಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಏಪ್ರಿಲ್ 3ರ ಮಧ್ಯರಾತ್ರಿ ಬೆಂಗಳೂರಿನ ಬಿಟಿಎಂ ಲೇಔಟ್‌ನ ಬಳಿ ನಡೆದುಕೊಂಡು ಹೋಗಿತಿದ್ದ ಯುವತಿಯನ್ನು ಹಿಂದಿನಿಂದ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದನು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸದ್ದುಗುಂಟೆ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದರು. ಇದೀಗ ಆರೋಪಿಯನ್ನು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ :13ಸಾವಿರ ಕೋಟಿ ವಂಚಿಸಿ ಪರಾರಿಯಾಗಿದ್ದ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಅರೆಸ್ಟ್
ಬೀದಿ ಕಾಮಣ್ಣನಿಗಾಗಿ ತೀವ್ರ ಹುಡುಕಾಟ..!
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸದ್ದಗುಂಟೆ ಪಾಳ್ಯ ಪೊಲೀಸರು, ಆರೋಪಿಯನ್ನು ಬಂಧಿಸಲು 4 ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖೆ ವೇಳೆ 700 ಸಿಸಿಟಿವಿ ದೃಶ್ಯವಳಿಗಳನ್ನು ಪರಿಶೀಲಿಸಿದ್ದ ಪೊಲೀಸರು. ಆರೋಪಿ ಸಂತೋಷ್ ತಮಿಳುನಾಡಿನ ಹೊಸೂರು ಮೂಲಕ ಪರಾರಿಯಾಗಿದ್ದು ಬೆಳಕಿಗೆ ಬಂದಿತ್ತು. ಆರೋಪಿಯನ್ನು ಹಿಂಭಾಲಿಸಿದ್ದ ಪೊಲೀಸರಿಗೆ ಆರೋಪಿ ಅಲ್ಲಿಂದ ಕೇರಳಕ್ಕೆ ಪರಾರಿಯಾಗಿದ್ದು ತಿಳಿದು ಬಂದಿತ್ತು.
ಇದನ್ನೂ ಓದಿ :ನನ್ನನ್ನು ಮುಗಿಸಲು ಬಂದ್ರೆ ಇಡೀ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ: ಯತ್ನಾಳ್
ಆರೋಪಿಯ ಬೆನ್ನತ್ತಿದ್ದ ಪೊಲೀಸರು ಏಪ್ರೀಲ್ 13ರಂದು ಕೇರಳದ ಕೋಝಿಕೋಡ್ ಬಳಿಯ ಸಣ್ಣ ಹಳ್ಳಿಯೊಂದರಲ್ಲಿ ಆರೋಪಿಯನ್ನು ಬಂದಿಸಿದ್ದು. ಸದ್ಯ ಆರೋಪಿಯನ್ನ ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿ ಕಸ್ಟಡಿಗೆ ಪಡೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.