Tuesday, April 15, 2025

ಅಗ್ನಿ ಅವಘಡದಲ್ಲಿ ಪಾರಾದ ಮಗ; ತಿರುಪತಿಗೆ ಮುಡಿಕೊಟ್ಟ ಪವನ್​ ಕಲ್ಯಾಣ್​ ಪತ್ನಿ

ತಿರುಪತಿ: ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರ 8 ವರ್ಷದ ಪುತ್ರ ಮಾರ್ಕ್ ಶಂಕರ್ ಏಪ್ರಿಲ್ 8ರಂದು ಸಿಂಗಾಪುರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ. ಇದೀಗ ಬಾಲಕನ ತಾಯಿ ಅನ್ನಾ ಲೆಜ್ನೀವಾ ತಿರುಪತಿಗೆ ಮುಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಏಪ್ರೀಲ್​ 8ರಂದು ಪವನ್​ ಕಲ್ಯಾಣ್​ ಪುತ್ರ ಮಾರ್ಕ್​ ಶಂಕರ್​ ಓದುತ್ತಿದ್ದ ಶಾಲೆಯಲ್ಲಿ ಬೆಂಕಿ ಅವಘಡ ಉಂಟಾಗಿ. ಬಾಲಕ ತೀವ್ರವಾಗಿ ಗಾಯಗೊಂಡಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಮಗನನ್ನು ನೋಡಲು ಪವನ್​ ಕಲ್ಯಾಣ್​ ಮತ್ತು ಪತ್ನಿ  ಅನ್ನಾ ಲೆಜ್ನೆವಾ ಸಿಂಗಾಪುರಕ್ಕೆ ತೆರೆಳಿದ್ದರು. ಇದನ್ನೂ ಓದಿ : ಹೊರ ರಾಜ್ಯಗಳಿಂದ ಬಂದ ಜನರಿಂದ ಅಪರಾಧ ಹೆಚ್ಚಾಗುತ್ತಿವೆ: ಪರಮೇಶ್ವರ್​

ಇದೀಗ ಪವನ್​ ಕಲ್ಯಾಣ ಸೇರಿದಂತೆ ಅವರ ಪತ್ನಿ ಮತ್ತು ಮಕ್ಕಳನ್ನು ಅಲ್ಲಿಂದ ಸುರಕ್ಷಿತವಾಗಿ ಹೈದರಾಬಾದ್‌ಗೆ ವಾಪಸ್ ಕರೆತಂದಿದ್ದಾರೆ. ಇನ್ನು, ಪತಿ ಜೊತೆ ಹೈದರಾಬಾದ್‌ಗೆ ಬರುತ್ತಿದ್ದಂತೆಯೇ, ಸಂಜೆಯೇ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗಿ ಮುಡಿ ಕೊಟ್ಟಿದ್ದಾರೆ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ. ಪವನ್ ಕಲ್ಯಾಣ್ ತಮ್ಮ ಕೆಲಸದಲ್ಲಿ ಬ್ಯುಸಿ ಇರುವುದರಿಂದ ಅನ್ನಾ ಒಬ್ಬರೇ ತಿರುಪತಿಗೆ ಆಗಮಿಸಿ, ಮುಡಿ ಸಮರ್ಪಿಸಿದ್ದಾರೆ.

ಇದನ್ನೂ ಓದಿ :ಯುವತಿಯ ಎದೆ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಹೈದರಾಬಾದ್‌ಗೆ ಮಗ ಮಾರ್ಕ್ ಶಂಕರ್‌ನೊಂದಿಗೆ ವಾಪಸಾದ ನಟ ಪವನ್ ಕಲ್ಯಾಣ್, ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. “ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಕುಟುಂಬದ ಜೊತೆ ಬೆಂಬಲವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಧನ್ಯವಾದಗಳು” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES