ಆನೇಕಲ್ : ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಯುವಪ್ರೇಮಿಗಳು ಅಂಬೇಡ್ಕರ್ ಪ್ರತಿಮೆ ಎದುರು ನವ ಜೀವನಕ್ಕೆ ಕಾಲಿಟ್ಟಿರುವ ಘಟನೆ ಅನೇಕಲ್ನಲ್ಲಿ ನಡೆದಿದ್ದು. ನವ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳನ್ನು ಮೈಸೂರು ಮೂಲದ 27 ವರ್ಷದ ಕಿರಣ್ ಮತ್ತು 20 ವರ್ಷದ ಪ್ರಿಯಾಂಕ ಎಂದು ಗುರುತಿಸಲಾಗಿದೆ.
ಮೂಲತಃ ಮೈಸೂರಿನ ಟಿ. ನರಸೀಪುರದವರಾದ ಕಿರಣ ಮತ್ತು ಪ್ರಿಯಾಂಕ ಇಬ್ಬರು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಎಲ್ಲಿ ಮನೆಯವರ ಕಾರಣದಿಂದ ದೂರವಾಗುತ್ತೇವೋ ಎಂದು ಹೆದರಿದ ಜೋಡಿ ಅನೇಕಲ್ ಬಳಿಯ ಅಂಬೇಡ್ಕರ್ ಪ್ರತಿಮೆ ಬಳಿ ಮದುವೆಯಾಗಿದ್ದಾರೆ.
ಇದನ್ನೂ ಓದಿ :ಅನೈತಿಕ ಸಂಬಂಧದ ಆರೋಪ; ತಾಲಿಬಾನ್ಗಳ ರೀತಿ ಮಹಿಳೆಗೆ ಥಳಿಸಿದ ದುಷ್ಕರ್ಮಿಗಳು
ಸಂವಿಧಾನದ ಪೀಠಿಕೆ ಮತ್ತು ಪಂಚಶೀಲ ನಡೆದು ಸರಳವಾಗಿ ವಿವಾಹವಾಗಿದ್ದು. ನವಜೋಡಿಗಳ ವಿವಾಹಕ್ಕೆ ತಹಶೀಲ್ದಾರ್ ಶಶಿ ಮಾಡ್ಯಾಳ್, ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ರೆಡ್ಡಿ ಶುಭ ಹಾರೈಸಿದ್ದಾರೆ.